ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಹೊರವಲಯದ ಜಿಡಗಾ ರಸ್ತೆಯಲ್ಲಿ ನಡೆದ ಕೊಲೆ ನಡೆದಿದೆ.
ಚಂದ್ರಶೇಖರ್ ಚೌಲ್ (21) ಕೊಲೆಯಾದ ದುರ್ದೈವಿ. ಚಾಕುವಿನಿಂದ ಚುಚ್ಚಿ ಬರ್ಬರ ಹತ್ಯೆ ಕೊಲೆ ಮಾಡಲಾಗಿದೆ.
ಶಾಸಕ ಬಿ.ಆರ್.ಪಾಟೀಲ್ ಆಪ್ತ, ಕಾಂಗ್ರೆಸ್ ಮುಖಂಡ ಬಸವರಾಜ್ ಚೌಲ್ ಪುತ್ರನಾಗಿದ್ದು, ಆತನ ಸ್ನೇಹಿತರಿಂದಲೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕೊಲೆಗೆ ಕಾರಣ ಸದ್ಯ ನಿಗೂಢವಾಗಿದ್ದು, ಆಳಂದ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.