ಜಿಲ್ಲೆ

ತುರುವೇಕೆರೆಯಲ್ಲಿ ರಾಗಾ ಪ್ರಚಾರ

ತುಮಕೂರು: ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಮೇ 1 ಬೆಳಗ್ಗೆ 10ಕ್ಕೆ ತುರುವೇಕೆರೆಗೆ ಆಗಮಿಸಲಿದ್ದು ಪಕ್ಷದ ಅಭ್ಯರ್ಥಿ ಬೆಮೆಲ್ ಕಾಂತರಾಜು ಪರ ರೋಡ್ ಶೋ ನಡೆಸಲಿದ್ದಾರೆ. ಗುರುಭವನದ ಆವರಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿರುವ ರಾಹುಲ್‌ಗಾಂಧಿಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಜಿಲ್ಲೆಯ ಪ್ರಮುಖ ನಾಯಕರು ಸಾಥ್ ನೀಡಲಿದ್ದಾರೆ.

ಈ ಕಾರ್ಯಕರ್ತರ ಸಭೆಗೆ 20 ಸಾವಿರ ಮಂದಿ ಸೇರಿಸುವ ಮೂಲಕ ಕಾಂಗ್ರೆಸ್ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿದೆ.

ಸಂತೆ ರದ್ದು

ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಸೋಮವಾರ ತುರುವೇಕೆರೆ ಪಟ್ಟಣದಲ್ಲಿ ನಡೆಯಲಿರುವ ಸಂತೆಯನ್ನು ರದ್ದು ಪಡಿಸಲಾಗಿದೆ. ಗುರುಭವನದಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಭಾಗವಹಿಸಲಿದ್ದು ಜಿಜೆಸಿ ಮೈದಾನದಿಂದ ವೈ.ಟಿ.ರಸ್ತೆ ಮೂಲಕ ಬಾಣಸಂದ್ರ ಸರ್ಕಲ್, ದಬ್ಬೇಘಟ್ಟ ಸರ್ಕಲ್‌ಗೆ ತೆರಳಲಿದ್ದು ಸುಗಮ ಸಂಚಾರಕ್ಕೆ ವಾಹನ ಮಾರ್ಗ ಬದಲಾವಣೆ ಜತೆಗೆ ಸಂತೆಯನ್ನು ಪೊಲೀಸರು ರದ್ದು ಪಡಿಸಿದ್ದಾರೆ.