ರಬಕವಿ-ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಎದುರಿನ ಜನೌಷಧ ಕೇಂದ್ರ ಮುಚ್ಚಿದ ಸರ್ಕಾರದ ವಿರುದ್ಧ ಶಾಸಕ ಸವದಿ ಕಾರ್ಯಕರ್ತರೊಡನೆ ಪ್ರತಿಭಟನೆ ನಡೆಸಿದರು. ನಗರಸಭೆ ಅಧ್ಯಕ್ಷೆ ವಿದ್ಯಾ ದಬಾಡಿ, ಶ್ರೀಶೈಲ ಬೀಳಗಿ, ಶಿವಾನಂದ ಗಾಯಕವಾಡ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ ಇದ್ದರು. 
ಜಿಲ್ಲೆ

ಕಾಂಗ್ರೆಸ್ ಸರ್ವನಾಶಕ್ಕೆ ಸಿದ್ದು ಶಕುನಿ ಆಟ

ದತ್ತಾತ್ರೇಯ ಪಿ ಕುಲಕರ್ಣಿ

ರಬಕವಿ-ಬನಹಟ್ಟಿ: ಕಾಂಗ್ರೆಸ್ ವಿರುದ್ಧ ಜನ್ಮಾಂತರದ ದ್ವೇಷವಿದ್ದಂತೆ ವರ್ತಿಸುತ್ತಿರುವ ಸಿಎಂ ಸಿದ್ಧರಾಮಯ್ಯ ಉತ್ತರ ಭಾರತದಲ್ಲಿ ನೆಲೆಯಿಲ್ಲದ ಪಕ್ಷಕ್ಕೆ ಕರ್ನಾಟಕದಲ್ಲಿಯೂ ಇನ್ನಮುಂದೆ ಅಧಿಕಾರ ಸಿಗದಂತೆ ನಿತ್ಯ ಬಡವರ, ಮಧ್ಯಮ ವರ್ಗದವರ ಕಿಸೆಗೆ ಕನ್ನ ಹಾಕುತ್ತ ಕೌರವರ ವಿನಾಶಕ್ಕೆ ಭಾಷ್ಯ ಬರೆದ ಶಕುನಿಯಂತೆ ವರ್ತಿಸುತ್ತಿದ್ದಾರೆಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಕಿಡಿಕಾರಿದರು.

ಶನಿವಾರ ಸಂಜೆ ರಬಕವಿ-ಬನಹಟ್ಟಿ ಸಮುದಾಯದ ಆರೋಗ್ಯಕೇಂದ್ರದ ಎದುರು ತೇರದಾಳ ಕ್ಷೇತ್ರವ್ಯಾಪ್ತಿ ಕಾರ್ಯಕರ್ತರೊಡನೆ ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಪಂಚಭಾಗ್ಯ ಕರುಣಿಸಿ ದಿನಕ್ಕೊಂದರಂತೆ ಬೆಲೆ ಏರಿಕೆ ಸುಲಿಗೆ ಮಾಡುತ್ತ ರಾಜ್ಯದ ಜನತೆಯ ಸಂಯಮ ಕೆಣಕುತ್ತಿದ್ದಾರೆ ಎಂದರು.

ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದ ಕಡಿಮೆ ಬೆಲೆಯ ಗುಣಮಟ್ಟದ ಔಷಧ ನೀಡುತ್ತಿದ್ದ ಜನೌಷಧ ಕೇಂದ್ರಗಳನ್ನು ಬಂದ್ ಮಾಡುವ ಮೂಲಕ ಮೆಡಿಕಲ್ ಮಾಫಿಯಾ ಪ್ರಭಾವಕ್ಕೀಡಾಗಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಬಡವರಿಗೆ ಆಹಾರ ನೀಡುವ ಇಂದಿರಾ ಕ್ಯಾಂಟೀನ್‌ಗಳು ಬಂದ್ ಆಗಿವೆ. ಕೇವಲ ಕಾಂಗ್ರೆಸ್ ಪ್ರಚಾರದ ಪರಿಕರಗಳಾಗಿವೆ ಎಂದರು.

ನಗರಸಭೆ ಅಧ್ಯಕ್ಷೆ ವಿದ್ಯಾ ದಬಾಡಿ, ಶ್ರೀಶೈಲ ಬೀಳಗಿ, ಶಿವಾನಂದ ಗಾಯಕವಾಡ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಭುಜಬಲಿ ವೆಂಕಟಾಪುರ, ಪ್ರಭು ಪಾಲಭಾಂವಿ, ಸಚಿನ ಕೊಡತೆ, ಯಲ್ಲಪ್ಪ ಕಟಗಿ, ಶ್ರೀಶೈಲ ಯಾದವಾಡ, ಶಿವಾನಂದ ಬುದ್ನಿ, ಮಾರುತಿ ಗಾಡಿವಡ್ಡರ, ಮಹಾವೀರ ಕೊಕಟನೂರ, ಯುನೂಸ್ ಚೌಗಲಾ, ಪ್ರಭಾಕರ ಮೊಳೇದ, ಗೌರಿ ಮಿಳ್ಳಿ, ದುರ್ಗವ್ವ ಹರಿಜನ, ಮಹಾನಂದಾ ಹೊರಟ್ಟಿ, ವೈಷ್ಣವಿ ಬಾಗೇವಾಡಿ, ಭಾರತಿ ಸಾಳುಂಕೆ, ಸವಿತಾ ಹೊಸೂರ, ಪಾಂಡುರಂಗ ಸಾಲ್ಗುಡೆ, ನಿಂಗಪ್ಪ ನಾಯಕ ಇದ್ದರು.