ಬೆಳಗಾವಿ: ಮಹಾತ್ಮಾ ಎಂದು ಪ್ರಖ್ಯಾತಿ ಪಡೆದ ನಾಯಕನ ಆಚರಣೆ ಮಾಡಬೇಕಾದರೆ ಯಾರೋ ಪ್ರತಿಭಟನೆ ಮಾಡಿದರೆ ಕಾಂಗ್ರೆಸ್ ಅವರು ಹೆದರಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜಕಾರಣ ಅಲ್ಲ. ಇದು ದೇಶದ ಒಂದು ಇತಿಹಾಸ. ಪಕ್ಷದ ಕಾರ್ಯಕ್ರಮ ಅಲ್ಲ. ಕಾಂಗ್ರೆಸ್ ಪಕ್ಷ ಅವತ್ತು ಇತ್ತು. ಇವತ್ತು ಇದೆ. ಗಾಂಧೀಜಿ ಅವರು ಈ ದೇಶಕ್ಕೆ ಪ್ರಜಾಪ್ರಭುತ್ವ ಕೊಡಿಸಿದ್ದಾರೆ. ಸಂವಿಧಾನ ಕೊಡಿಸಿದ್ದಾರೆ. ಇದೆಲ್ಲವು ಗಾಂಧೀಜಿ ಅವರ ಮುಖಂಡತ್ವದಲ್ಲಿ ನಡೆದ ಘಟನೆಗಳು. ಇದೆಲ್ಲವನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರಬೇಕು. ಮಹಾತ್ಮಾ ಎಂದು ಪ್ರಖ್ಯಾತಿ ಪಡೆದ ನಾಯಕ ಆಚರಣೆ ಮಾಡಬೇಕಾದರೆ ಯಾರೋ ಮಾಡುವ ಪ್ರತಿಭಟನೆಗೆ ಕಾಂಗ್ರೆಸ್ ಅವರು ಹೆದರಿಕೊಳ್ಳುತ್ತಾರಾ? ಕಾಂಗ್ರೆಸ್ ಪಕ್ಷದ ಅಧ್ಯಕ್ಷ ನಾ ಇನ್ನು ಇದ್ದೇನೆ. ಬದುಕಿದ್ದೇನೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.