ಶಿವಮೊಗ್ಗ: ಲೇಖಕಿ ವಾಣಿ ಗೌಡ ಅವರ ಕಾಂಗ್ರೆಸ್ ಹೌಸ್ ಕಾದಂಬರಿ ಸೆ.10ರಂದು ಸಂಜೆ 6 ಗಂಟೆಗೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಬಿಡುಗಡೆಯಾಗಲಿದೆ ಎಂದು ಜಿಲ್ಲಾ ಜನಪದ ಸಂಘದ ಸಂಚಾಲಕಿ ಪ್ರತಿಭಾ ತಿಳಿಸಿದರು.
ಪುಸ್ತಕ ಬಿಡುಗಡೆ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಉದ್ಘಾಟಿಸುವರು. ಬೆಂಗಳೂರು ಜಿಲ್ಲಾಽಕಾರಿ ಕೆ.ಎ.ದಯಾನಂದ, ಹಿರಿಯ ಸಾಹಿತಿ ಸವಿತಾ ನಾಗಭೂಷಣ್, ಪ್ರಕಾಶಕ ಶರವಣ ಕುಮಾರ್ ಮುಂತಾದವರು ಉಪಸ್ಥಿತರಿರುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾದಂಬರಿ ಲೇಖಕಿ ವಾಣಿಗೌಡ ಮಾತನಾಡಿ, ಕಾಂಗ್ರೆಸ್ ಹೌಸ್ ನನ್ನ ಮೊದಲ ಕಾದಂಬರಿ. ಈ ಕಾದಂಬರಿಯು ಒಂದು ಹೆಣ್ಣಿನ ಸಂಕಟಗಳ ಹೋರಾಟದ ನೈಜ ಕಥೆಯಾಗಿದೆ. ಆ ಹೆಣ್ಣಿನ ಅನುಭವಗಳನ್ನು ಆಕೆಯಿಂದಲೇ ಕೇಳಿ ಈ ಕೃತಿಯನ್ನು ರಚಿಸಲಾಗಿದೆ. ಇದಕ್ಕಾಗಿ ೬ ತಿಂಗಳು ಅಧ್ಯಯನ ಮಾಡಿದ್ದೇನೆ. ಕಾದಂಬರಿ ಪೂರ್ಣಗೊಳಿಸಲು ಎರಡು ವರ್ಷ ಬೇಕಾಯಿತು ಎಂದರು.
ಕಾAಗ್ರೆಸ್ ಹೌಸ್ ಎಂಬ ಹೆಸರೇ ಒಂದು ರೀತಿಯಲ್ಲಿ ಕುತೂಹಲ ಮೂಡಿಸಿದೆ. ಕಾದಂಬರಿ ಬಿಡುಗಡೆಗೂ ಮುನ್ನವೇ ಕಾದಂಬರಿಯ ವಸ್ತುವಿನ ಬಗ್ಗೆ ಚರ್ಚೆಯಾಯಿತು. ಇದು ಕಾಂಗ್ರೆಸ ಪಕ್ಷದ ಹಿನ್ನೆಲೆಯಲ್ಲಿ ಇರಬೇಕು ಎಂದುಕೊAಡವರು ಬಹಳ ಜನ. ಈ ಬಗ್ಗೆ ಅನೇಕರು ನನ್ನ ಬಳಿ ಚರ್ಚಿಸಿದ್ದಾರೆ. ಆದರೆ ಈ ಕಾದಂಬರಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವ ಸಂಬAಧವೂ ಇಲ್ಲ ಎಂದರು.