ರಾಯಚೂರು ಮರು ಜಾತಿಗಣತಿ ಸಮೀಕ್ಷೆ ವಿಚಾರದಲ್ಲಿ ಕಾಂಗ್ರೆಸ್‌ನವರಿಗೆ ಸಾಮಾಜಿಕ ಬದ್ದತೆ ಇಲ್ಲ. ನೆಹರುವಿನಿಂದ ರಾಜೀವ್ ಗಾಂಧಿ ವರೆಗೆ ಮೀಸಲಾತಿ ವಿಚಾರದಲ್ಲಿ ವಿರೋಧ ಮಾಡಿದ್ದಾರೆ ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರ ಶಾಸಕರ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷದವರು ವಿರೋಧ ಮಾಡಿದ್ದಾರೆ. ಮೀಸಲಾತಿ ವಿರುದ್ಧ ಸಂಸತ್ತಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅತಿ ದೊಡ್ಡ ಭಾಷಣ ಮಾಡಿದ್ದಾರೆ ನೆಟ್ ನಲ್ಲಿ ತೆಗದು ನೋಡಿ ಬಂಡವಾಳ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಸರ್ಕಾರದ 11 ವರ್ಷದ ಆಡಳಿತಾವಧಿಗೆ ಸಿಎಂ ಸಿದ್ದರಾಮಯ್ಯ ಅವರು ಝಿರೋ ಅಂಕ ನೀಡಿದ್ದಾರೆ. ಸಿಎಂ ಅವರು ತಮ್ಮ ಕುರ್ಚಿ ಸುಭದ್ರವಾಗಿ ಉಳಿಸಿಕೊಳ್ಳಲು ಈ ರೀತಿ ಹೇಳುತ್ತಿದ್ದಾರೆ. ಆದರೆ ರಾಹುಲ್ ಗಾಂಧಿಗೆ ಜನ ಝಿರೋ ನೀಡಿರುವುದು ಹೇಳುವುದಿಲ್ಲ. 2014 ರಿಂದ 30-32 ಸಾರಿ ರಾಹುಲ್ ಗಾಂಧಿಯನ್ನು ಲಾಂಚಿಂಗ್ ರಿಲಾಂಚಿಂಗ್ ಮಾಡುತ್ತಿದ್ದಾರೆ. ದೇಶದಲ್ಲಿ ಚಂದ್ರಯಾನ ಒಂದು ಬಾರಿ ಫೇಲ್ ಆಗಿ ಯಶಸ್ವಿಯಾಯಿತು ಆದರೆ ರಾಹುಲ್ ಗಾಂಧಿ ಮಾತ್ರ ಯಶಸ್ವಿಯಾಗಿಲ್ಲವೆಂದು ಟೀಕಿಸಿದರು.
ದೇಶದಲ್ಲಿ ನರೇಂದ್ರ ಮೋದಿಯವರ 11 ವರ್ಷದ ಆಡಳಿತದಲ್ಲಿ ಯುಗ ಪರಿವರ್ತನೆಯಂತೆ ಅಭಿವೃದ್ದಿ ಬದಲಾವಣೆಯಾಗಿದೆ. 2008ರಲ್ಲಿ ಯುಪಿಎ ಸರ್ಕಾರ ಆಡಳಿತ ಅವಧಿಯಲ್ಲಿದ್ದ ಆರ್ಥಿಕ ಬೆಳವಣಿಗೆ ದಾಖಲೆ ಮಟ್ಟದಲ್ಲಿ ಬೆಳವಣಿಗೆ ಕಂಡಿದೆ. ಜಗತ್ತಿನ ನಾಲ್ಕನೇ ಆರ್ಥಿಕ ಬೆಳವಣಗೆ ದೇಶವಾಗಿ ಭಾರತ ಹೊರಹೊಮ್ಮಿದೆ.
ಈ 7 ಸಭೆಗೆ ಭಾರತವನ್ನು ಅಹ್ವಾನಿಸಿಲ್ಲ ಎಂದು ಆರೋಪ ಮಾಡಿ ಕಾಂಗ್ರೆಸ್ಸಿಗರು ಮಂಗ್ಯಾ ಆಗ್ಯಾರ ಎಂದು ಟೀಕಿಸಿದರು. ನೆಹರು ಕಾಲದಿಂದ ಇಂದಿರಾಗಾಂಧಿ, ರಾಜೀವಗಾಂಧಿಯಿಂದ ಹಿಡಿದು ಸೋನಿಯಾಗಾಂಧಿ, ರಾಹಲು ಗಾಂಧಿವರಗೆಗೆ ಬಡತನ ನಿರ್ಮೂಲನೆ ಮಾತನಾಡಿದ್ದಾರೆ ಹೊರತು ನಿರ್ಮೂಲನೆ ಮಾಡಿಲ್ಲ. ಶೇ.11 ರಷ್ಟಿದ್ದ ಬಡತನ ಈಗ ಶೇ.5ಕ್ಕೆ ಇಳಿದಿದೆ. 26 ಕೋಟಿ ಜನರು ಬಡತನದಿಂದ ಹೊರಬಂದಿರುವದನ್ನು ವಿಶ್ವಬ್ಯಾಂಕ್ ಬಹಿರಂಗಪಡಿಸಿದೆ. ರಾಜ್ಯ ಸರ್ಕಾರ ನೆಲಕಚ್ಚುವ ದಾರಿಯಲ್ಲಿ ಮುಂದುವರೆದಿದೆ.
ಶೇ.60ರಷ್ಟು ಬ್ರಷ್ಟಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರ ಆರೋಪಿಸಿದ್ದಾರೆ. ನಿತ್ಯವೂ ಸಿಎಂಬದಲಾವಣೆ ಮಾತುಗಳು ಕೇಳಿಬರುತ್ತಿವೆ. ಅತಿಯಾದ ತುಷ್ಠಿಕರಣದಿಂದ ಸಮಾಜದಲ್ಲಿ ಅಶಾಂತಿ ಉಂಟಾಗಲು ಕಾರಣವಾಗುತ್ತಿದೆ. ಮಂಗಳೂರಿನಲ್ಲಿ ಬಿಜೆಪಿ, ವಿಎಚ್‌ಪಿ, ಬಜರಂಗದಳದ ಕಾರ್ಯಕರ್ತರನ್ನು ಗುರಿ ಮಾಡಲಾಗುತ್ತಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಅಧಿಕಾರಿಗಳ ಮೂಲಕ ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಆನರು ಬಿಜೆಪಿ ಸಿದ್ದಾಂತಗಳನ್ನು ಮೆಚ್ಚಿದ್ದಾರೆ ಎಂದರು.
ನರೇಂದ್ರ ಮೋದಿಯವರ ಆಡಳಿತಕ್ಕೆ ಮುಖ್ಯಮಂತ್ರಿ ಶೂನ್ಯ ಅಂಕ ನೀಡಿದ್ದಾರೆ. ಅವರ ಅಧಿಕಾರ ಉಳಿಸಿಕೊಳ್ಳಲು ಹೇಳಬೇಕಾಗಿದೆ. ದೇಶ ಜನರೇ ರಾಹುಲಗಾಂಧೀಗೆ ಜೀರೋ ನಾಯಕತ್ವ ನೀಡಿದ್ದಾರೆ ಎಂದು ಲೇವಡಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಡಾ,ಶಿವರಾಜ ಪಾಟೀಲ್, ತ್ರೀವಿಕ್ರಮ ಜ್ಯೋಶಿ, ಕನಕವಿಡು ಇದ್ದರು.