ಮಳವಳ್ಳಿಯಲ್ಲಿ ಶುಕ್ರವಾರ ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆ ಪೋಸ್ಟರ್‌ಅನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಬಿಡುಗಡೆ ಮಾಡಿದರು. ಶಿವಮೂರ್ತಿ, ಮಮತಾ, ಲೋಕೇಶ್, ದೇವರಾಜು, ಕೆ.ವಿ.ಪ್ರಕಾಶ್, ಬಂಕ್ ಮಹದೇವ, ಗುಳಘಟ್ಟ ಮಹದೇವ, ಮಾರೇಹಳ್ಳಿ ಬಸವರಾಜು ಇದ್ದರು. 
ಜಿಲ್ಲೆ

ಪಂಚ ಗ್ಯಾರಂಟಿ ಜಾರಿಯಿಂದ ವಿಶ್ವಾಸ ಉಳಿಸಿಕೊಂಡಿದೆ ಕಾಂಗ್ರೆಸ್

ಮಾದೇಶ್ ತಿ.ನರಸೀಪುರ

ಮಳವಳ್ಳಿ: ಚುನಾವಣೆ ಪೂರ್ವದಲ್ಲಿ ನೀಡಿದ್ದ ಎಲ್ಲ ಐದು ಭರವಸೆಯ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಉಳಿಸಿಕೊಂಡಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.


ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಶುಕ್ರವಾರ ರಾಜ್ಯ ಸರ್ಕಾರದ 5ನೇ ಗ್ಯಾರಂಟಿಯಾದ ಯುವನಿಧಿ ಯೋಜನೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಹಲವಾರು ಯಾತ್ರೆಗಳನ್ನು ನಡೆಸಿ 265 ಆಶ್ವಾಸನೆ ನೀಡಿ ಅಧಿಕಾರ ನಡೆಸಿದವರು ಈಡೇರಿಸಿದ್ದು ಹತ್ತು ಭರವಸೆಗಳನ್ನು ಮಾತ್ರ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಟೀಕಿಸಿದರು.


ಉಪವಿಭಾಗಾಧಿಕಾರಿ ಶಿವಮೂರ್ತಿ, ತಾಲೂಕು ಪಂಚಾಯಿತಿ ಇಒ ಮಮತಾ, ತಹಸೀಲ್ದಾರ್ ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ತಾಪಂ ಮಾಜಿ ಅಧ್ಯಕ್ಷ ಕೆ.ವಿ.ಪ್ರಕಾಶ್, ಮುಖಂಡರಾದ ಬಂಕ್ ಮಹದೇವ, ಗುಳಘಟ್ಟ ಮಹದೇವ, ಮಾರೇಹಳ್ಳಿ ಬಸವರಾಜು ಇತರರು ಇದ್ದರು.