ಜಿಲ್ಲೆ

ಕಾ೦ಗ್ರೆಸ್‌ನವರದ್ದು ಇಟಲಿ ಮನಸ್ಥಿತಿ

ಮಂಜುನಾಥ ಅಂಗಡಿ

ಧಾರವಾಡ: ಇಟಲಿ ಮನಸ್ಥಿತಿಯ ಕಾಂಗ್ರೆಸ್ಸಿಗರಿAದ ಶ್ರೀರಾಮನ ಬಗ್ಗೆ ಏನೂ ಅಪೇಕ್ಷೆ ಮÁಡಲು ಸಾಧ್ಯವಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು.
ನಗರದಲ್ಲಿ ಶುಕ್ರವಾರ ಮÁತನಾಡಿದ ಅವರು, ಸೋನಿಯಾ ಗಾಂಽ ಮತ್ತು ರಾಹುಲ್ ಗಾಂಽ ಅವರನ್ನು ಮೆಚ್ಚಿಸಲು ಕಾಂಗ್ರೆಸ್ಸಿಗರು ತಮ್ಮ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ. ಕಾಂಗ್ರೆಸ್ಸಿಗರು ಮೊದಲು ರಾಮ ಕಾಲ್ಪನಿಕ ಎಂದಿದ್ದರು. ರಾಮಸೇತು ತೆಗೆಯಬೇಕು, ರಾಮ ಹುಟ್ಟಿದ ನೆಲದಲ್ಲೇ ರಾಮ ಏಕೆ ಬೇಕು ಎಂದು ಪ್ರಶ್ನಿಸಿದ್ದರು. ಕುಂಟು ನೆಪ ಹೇಳುತ್ತಿರುವ ಅವರ ಬಣ್ಣ ಈಗ ಬಯಲಾಗುತ್ತಿದೆ. ಅವರದು ಯಾವಾಗಲೂ ಹಿಂದು ವಿರೋಽ ಅಜೆಂಡಾ ಎಂದರು.
ಸಿಎA ವಿರುದ್ಧ ಸಂಸದ ಅನಂತಕುಮÁರ ಹೆಗಡೆ ಏಕವಚನದಲ್ಲಿ ಮÁತನಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಹೆಗಡೆ ಹೇಳಿಕೆಯನ್ನು ಒಪ್ಪುವುದಿಲ್ಲ. ಮುಖ್ಯಮಂತ್ರಿ ವಯಸ್ಸು ಮತ್ತು ಅನುಭವದಲ್ಲಿ ದೊಡ್ಡವರು. ಜವಾಬ್ದಾರಿ ಸ್ಥಾನದಲ್ಲಿರುವ ಅವರ ಬಗ್ಗೆ ಗೌರವದಿಂದ ಮÁತನಾಡಬೇಕು. ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿರುವುದು ತಪ್ಪು ಎಂದರು.