ಚಿಕ್ಕಬಳ್ಳಾಪುರ: ಒಳ್ಳೆಯ ಆಡಳಿತವನ್ನು ನೀಡುವ, ರಾಜ್ಯವನ್ನು ಸೌಭಾಗ್ಯ ತರುವ ಮತ್ತು ಉದ್ಧಾರ ಮಾಡುವ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಆರ್ಥಿಕ ದಿವಾಳಿತನದ ಮೂಲಕ ದೌರ್ಭಾಗ್ಯ ಸ್ಥಿತಿ ನಿರ್ಮಿಸಿದೆ ಎಂದು ಸಂಸದ ಡಾ ಕೆ.ಸುಧಾಕರ್ ವ್ಯಂಗ್ಯವಾಡಿದರು.
ಜಿಲ್ಲಾಡಳಿತ ಭವನದ ಮುಂಭಾಗ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಉಚಿತ ಸೇವೆಯನ್ನು ಘೋಷಿಸಿ, ಹಾಗೆಯೇ ಎಲ್ಲ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಲಾಗುತ್ತಿದೆ. ದಿವಾಳಿಯ ಸರ್ಕಾರವು ರೈತರ ಬದುಕು ನಾಶ ಮಾಡುತ್ತಿದೆ. ಲೀಟರ್ ಹಾಲಿಗೆ ನೀಡಲಾಗುತ್ತಿರುವ ಹಣವನ್ನು ಕಡಿತಗೊಳಿಸಲಾಗುತ್ತಿದೆ. ಮತ್ತೊಂದೆಡೆ ಗ್ರಾಹಕರಿಗೆ ಬೆಲೆ ಏರಿಕೆ ಹೊರೆ ಹಾಕಲಾಗಿದೆ ಎಂದರು.
* ಯೋಗ್ಯತೆ ಇಲ್ಲದಿದ್ದಲ್ಲಿ ಅಧಿಕಾರ ಬಿಡಿ
ಜನಪರ ಆಡಳಿತ ನೀಡಲು ಯೋಗ್ಯತೆ ಇಲ್ಲದಿದ್ದಲ್ಲಿ ಅಧಿಕಾರವನ್ನು ಬಿಟ್ಟು ಹೋಗಲಿ ಎಂದು ಸಂಸದರು ಕಿಡಿಕಾರಿದರು.
ಒಂದೆಡೆ ಉಚಿತ ಯೋಜನೆಗಳ ಸವಲತ್ತುಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಮತ್ತೊಂದೆಡೆ ಬೆಲೆ ಏರಿಕೆಯ ಮೂಲಕ ಜನ ವಿರೋಧಿ ಧೋರಣೆಯನ್ನು ಪ್ರದರ್ಶಿಸಲಾಗುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಸಚಿವ ಎಂ.ರಾಜಣ್ಣ ನೇತೃತ್ವದಲ್ಲಿ ಸುಧಾರಣೆಯನ್ನು ನಿರೀಸಲಾಗಿತ್ತು. ಆದರೆ, ಹಾಳು ಮಾಡುವ ಮೂಲಕ ಹೆಸರು ಕೆಡಿಸಲಾಗುತ್ತಿದೆ ಎಂದು ಕಿಡಿಕಾರಿದರು.
*ಹಸುಗಳೊಂದಿಗೆ ಪ್ರತಿಭಟನೆ
ಹಾಲಿನ ದರ ಕಡಿತ, ನಿರ್ವಹಣೆ ವೆಚ್ಚ ಹೆಚ್ಚಳ, ದುಬಾರಿ ಹೊರೆ, ಸಂಕಷ್ಟದ ಸಮಸ್ಯೆಗಳ ಬ್ಯಾನರುಗಳನ್ನು ಹಾಕಿದ್ದ ರಾಸುಗಳನ್ನು ಕರೆದುಕೊಂಡು ಬಂದು ರೈತರು ಪ್ರತಿಭಟಿಸಿದರು. ಹೈನುಗಾರಿಕೆಯನ್ನು ರಸಿ, ರೈತರನ್ನು ಉಳಿಸಿ, ಸಹಕಾರಿ ಕ್ಷೇತ್ರದಲ್ಲಿ ಸುಧಾರಣೆ ತನ್ನಿ, ಹಾಳು ಮಾಡದಿರಿ ಎಂಬ ಘೋಷಣೆಗಳನ್ನು ಕೂಗಿದರು.