ರಾಯಚೂರು ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ಸೌಂದರ್ಯೀಕರಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ಟೆಂಡರ್ ಆಗಿದ್ದರೂ, ಕಾಂಗ್ರೆಸ್ ಪಕ್ಷದ ಗುಂಪುಗಾರಿಕೆಯಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹಾಗೂ ಸಚಿವ ಎನ್.ಎಸ್.ಬೋಸರಾಜುರ ಗುಂಪುಗಾರಿಕೆಯಿಂದ ಅಭಿವೃದ್ಧಿ ಅಡ್ಡಿಯಾಗಿದ್ದು, 40 ಕೋಟಿ ರೂ.ಕಾಮಗಾರಿಗಳಿಗೆ ನಗರಾಭಿವೃದ್ಧಿ ಇಲಾಖೆ ಆಯುಕ್ತರು ಅನುಮೋದನೆ ನೀಡಿದ್ದರೂ ಕೆಲಸ ಪ್ರಾರಂಭವಾಗಿಲ್ಲ.
ಫೆಬ್ರುವರಿ 20 ರಂದು 18ಕಾಮಗಾರಿಗಳಿಗೆ ಅನುಮೋದನೆನೀಡಲಾಗಿದೆ. ಮೇ.16 ರಂದು ಆಯುಕ್ತರು ಕಾಮಗಾರಿಗೆ ಅನುಮೋದನೆ ನೀಡಿದ್ದಾರೆ. ಪಿಡಬ್ಲೂಡಿ ಇಲಾಖೆಗೆ ಕಾಮಗಾರಿವಹಿಸಲಾಗಿದೆ. 5 ತಿಂಗಳಾದರೂ ಕಾಲಹರಣ ಮಾಡಲಾಗುತ್ತಿದೆ. ಸಚಿವರ ಸೂಚನೆ ಮೇರೆಗೆ ಕೆಲಸಗಳು ಸ್ಥಗಿತಗೊಂಡಿವೆ ಒಂದುವಾರದಲ್ಲಿ ಕಾಮಗಾರಿಗಳು ಪ್ರಾರಂಭವಾಗದೇ ಹೋದಲ್ಲಿ ವಿನೂತನ ಹೋರಾಟಕ್ಕೆ ಜೆಡಿಎಸ್ ಸಿದ್ದಗೊಳ್ಳಲಿದೆ ಎಂದು ಎಚ್ಚರಿಸಿದರು.