ಜಿಲ್ಲೆ

ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್.ಪಾಟೀಲ್ ನಿಧನ


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದ ಹಿರಿಯ ನ್ಯಾಯವಾದಿಗಳಾದ ಬಿ.ಎಸ್.ಮಾಲಿ ಪಾಟೀಲ್ ಬಳಬಟ್ಟಿ (97) ಬುಧವಾರ ನಿಧನರಾದರು. ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಮತ್ತು ಧರ್ಮಸಿಂಗ್ ಅವರ ಆಪ್ತರಾಗಿದ್ದರು.
ವಯೋಸಹಜ ಕಾಯಿಲೆಗಳಿಂದ ಬಳುತ್ತಿದ್ದರು. ಐವರು ಪುತ್ರಿಯರು, ಒಬ್ಬ ಪುತ್ರ ಸೇರಿದಂತೆ ಬಂಧುಗಳಿದ್ದಾರೆ. ಬಳಬಟ್ಟಿ ಪಾಟೀಲ್ ಅವರು 18 ವರ್ಷಗಳ ಕಾಲ ಕಲಬುರಗಿ ಎಪಿಎಂಸಿ ಅಧ್ಯಕ್ಷರಾಗಿದ್ದರು. ಎಸಿಸಿ ಕಂಪನಿಯ ನಿರ್ದೇಶಕರಾಗಿ, ಜೇವರ್ಗಿ ಟಿಡಿಬಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಯಡ್ರಾಮಿ ತಾಲೂಕಿನ ಬಳಬಟ್ಟಿ ಗ್ರಾಮದವರಾದ ಬಸನಗೌಡ ಮಾಲಿಪಾಟೀಲ್ ಅವರು ಕಾನೂನು ಶಿಕ್ಷಣ ಮುಗಿಸಿದ ನಂತರ ಐದು ದಶಕಗಳ ಕಾಲ ವಕೀಲ ವೃತ್ತಿಯನ್ನು ಮಾಡಿದ್ದರು. ವೃತ್ತಿಯ ಜತೆಗೆ ರಾಜಕೀಯದಲ್ಲಿಯೂ ತಮ್ಮದೆ ಆದ ಚಾಪು ಮೂಡಿಸಿದ್ದರು. ಧರ್ಮಸಿಂಗ್ ಅವರ ಜತೆಗೆ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.ಅoತ್ಯಕ್ರಿಯೆ ಸ್ವಗ್ರಾಮ ಬಳಬಟ್ಟಿಯಲ್ಲಿರುವ ಸ್ವಂತ ಹೊಲದಲ್ಲಿ ಸೆ.5ರಂದು, 2 ಗಂಟೆಗೆ ನೆರವೇರಿಸಲಾಗುತ್ತದೆ.
ಬಿ.ಎಸ್.ಪಾಟೀಲ್ ಅವರ ನಿಧನಕ್ಕೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಡಾ.ಬಿ.ಜಿ.ಪಾಟೀಲ್, ಎಂ.ವೈ.ಪಾಟೀಲ್,ಬಿ.ಆರ್.ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಗುಪ್ತಲಿಂಗ ಪಾಟೀಲ್ ಹಾಗೂ ಪದಾಧಿಕಾರಿಗಳು, ಸದಸ್ಯರು, ಜೇವರ್ಗಿ-ಯಡ್ರಾಮಿ ತಾಲೂಕಿನ ಕಲಬುರಗಿ ನಿವಾಸಿಗಳ ಸಂಘದ ಅಧ್ಯಕ್ಷ ವಿಜಯಕುಮಾರ ದುದ್ದಗಿ, ಗೌರವಾಧ್ಯಕ್ಷ ಎಂ.ಕೆ.ಪಾಟೀಲ್ ಕೆಲ್ಲೂರ ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ.