ಶಿರಾ: ಬಿಜೆಪಿ, ಪ್ರಸ್ತುತ ಚುನಾವಣೆಯಲ್ಲಿ ಮುಸ್ಲಿಮರಿಗಾಗಲಿ ಕ್ರಿಶ್ಚಿಯನ್‌ರಿಗಾಗಲಿ ಒಂದೇ ಒಂದು ಟಿಕೆಟ್ ಕೊಟ್ಟಿಲ್ಲ. ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳನ್ನು ಹೊರಗಿಟ್ಟರೆ ಸಬ್ ಕಾ ಸಾಥ್ ಹೇಗಾಗುತ್ತೆ? ಸಿಲಿಂಡರ್, ಪೆಟ್ರೋಲ್, ಅಡುಗೆ ಎಣ್ಣೆ, ಗೊಬ್ಬರ ಹೀಗೆ ಪ್ರತಿಯೊಂದು ಪದಾರ್ಥದ ಬೆಲೆಯೂ ಹೆಚ್ಚಾಗಿದೆ. ಇದನ್ನು ಅಚ್ಚೆ ದಿನ್ ಎಂದು ಹೇಳಬೇಕಾ? ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.
ಭಾನುವಾರದಂದು ಶಿರಾ ನಗರದಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಪರ ಮತಯಾಚಿಸಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ಕೆಂಪಣ್ಣ ಎಂಬುವರು ಪ್ರಧಾನಿಗೆ ಪತ್ರ ಬರೆಯುತ್ತಾರೆ. ಆದರೂ ಪ್ರಧಾನಿ ಏನು ಕ್ರಮ ಕೈಗೊಳ್ಳುವುದಿಲ್ಲ. ನಾವು ತಿನ್ನುವುದಿಲ್ಲ ತಿನ್ನುವವರಿಗೂ ಬಿಡುವುದಿಲ್ಲ ಎಂದು ಅಧಿಕಾರಕ್ಕೆ ಬಂದ ಮೋದಿಜಿ ಇದು ಸರಿನಾ? ಎಂದು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.