ತುಮಕೂರು : ಗುಜರಾತ್‌ನಂತೆ ರಾಜ್ಯದಲ್ಲೂ ಕಾಂಗ್ರೆಸ್ ಗಂಟುಮೂಟೆ ಕಟ್ಕೊಂಡ್ ಹೋಗುತ್ತೆ. ಈಗಾಗಲೇ ಸರ್ಫ ಪೌಡರ್ ಹಾಕಿಕೊಂಡು ಕಾಂಗ್ರೆಸ್ಸನ್ನು ಎಎಪಿ ತೊಳೆದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಟಿಪ್ಪುಗಾಗಿ ಪ್ರಾಣ ಬಿಡುವ ಕಾಂಗ್ರೆಸ್ ರಾಜ್ಯಕ್ಕೆ ಬೇಕಾಗಿಲ್ಲ. ಗುಜರಾತ್‌ನಲ್ಲಿ ವಿರೋಧ ಪಕ್ಷ ಆಗಲೂ ಯೋಗ್ಯತೆ ಇಲ್ಲದಂತಾಗಿರುವ ಕಾಂಗ್ರೆಸ್‌ಗೆ ರಾಜ್ಯದಲ್ಲಿಯು ಅದೇ ಹೀನಾಯ ಸ್ಥಿತಿ ಬರಲಿದೆ. ಗುಜರಾತ್ ಮಾದರಿ ಗುಜರಾತ್‌ನಲ್ಲೇ. ಕರ್ನಾಟಕಕ್ಕೆ ಬೇರೆ ಮಾಡೆಲ್ಲೇ. ಮೋದಿ ಪ್ರತಿ 15 ದಿನಕ್ಕೆ ಒಂದು ಬಾರಿ ರಾಜ್ಯಕ್ಕೆ ಬರುತ್ತಾರೆ. ಅಮಿತ್ ಷಾ ಪ್ರತಿ ತಿಂಗಳು 4 ಬಾರಿ ಬರುತ್ತಾರೆ. ಅಭ್ಯರ್ಥಿಗಳ ಆಯ್ಕೆ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದರು.