ಜಿಲ್ಲೆ

ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮಾಚರಣೆ ಸಭೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಷ್ಟçಪಿತ ಮಹಾತ್ಮಾ ಗಾಂಧಿ ಅಧ್ಯಕ್ಷತೆಯ ಬೆಳಗಾವಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮಾಚರಣೆ ಸಭೆಯನ್ನು ಡಿ. 26ರಂದು ಸಂಜೆ 5ಕ್ಕೆ ನಗರದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ಭಾರತ ಏಕತಾ ಆಂದೋಲನ ಕಾರ್ಯಾಧ್ಯಕ್ಷ ಮಹಾದೇವ ಹೊರಟ್ಟಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿದ್ಯಾವರ್ಧಕ ಸಂಘ, ಗಾಂಽ ಪ್ರತಿಷ್ಠಾನ ಕೇಂದ್ರ, ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾರತ ಏಕತಾ ಆಂದೋಲನ ಸಂಘಟನೆಗಳ ಆಶ್ರಯದಲ್ಲಿ ಸಭೆ ಏರ್ಪಡಿಸಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗ ಮುಖ್ಯಸ್ಥೆ ಡಾ. ಜಯಶ್ರೀ ಎಸ್. ಕಾರ್ಯಕ್ರಮ ಉದ್ಘಾಟಿಸುವರು. ಗಾಂಧಿವಾದಿ ಚಿಂತಕ ಪ್ರೊ. ಶಿವಾನಂದ ಶೆಟ್ಟರ ಅಧ್ಯಕ್ಷತೆ ವಹಿಸುವರು ಎಂದರು.

ಗಾ0ಧಿ ಪ್ರತಿಷ್ಠಾನ ಕೇಂದ್ರದ ಅಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಹಿರಿಯ ಪತ್ರಕರ್ತ ಮನೋಜ ಪಾಟೀಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ವಿದ್ಯಾರಣ್ಯ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ಶರಣಮ್ಮ ಗೊರೆಬಾಳ, ಸಿ.ಎಸ್.ಐ ಮಹಾವಿದ್ಯಾಲಯದ ಡಾ. ಶಂಭು ಹೆಗಡಾಳ, ಮೃತ್ಯುಂಜಯ ಮಹಾವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ವೀಣಾ ಯಲಿಗಾರ ಅತಿಥಿಯಾಗಿ ಪಾಲ್ಗೊಳ್ಳುವರು. ಭಾರತ ಏಕತಾ ಆಂದೋಲನದ ಕಾರ್ಯಾಧ್ಯಕ್ಷ ಮಹಾದೇವ ಹೊರಟ್ಟಿ ಉಪಸ್ಥಿತರಿರುವರು ಎಂದರು.

ಕರ್ನಾಟಕ ವಿಶ್ವವಿದ್ಯಾಲಯ ಸಂಗೀತ ಮಹಾವಿದ್ಯಾಲಯ, ಬಾಲಬಳಗ ವಿದ್ಯಾರ್ಥಿಗಳು ಹಾಗೂ ರಾಮಕುಮಾರ ಶಿಂಧೆ, ಪ್ರೇಮಕ್ಕ ಹೊರಟ್ಟಿ, ಪ್ರೇಮಕ್ಕ ಹಲಕಿ, ಅಂಜಲೀನಾ ಗ್ರೇಗರಿ ಅವರಿಂದ ಗಾಂಧಿ ಭಜನೆ ಮತ್ತು ಗೀತೆಗಳು ಪ್ರಸ್ತುತಗೊಳ್ಳಲಿವೆ ಎಂದರು.