ಜಿಲ್ಲೆ

ವಾಯವ್ಯ ಶಿಕ್ಷಕರ ಮತ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ ಭರ್ಜರಿ ಗೆಲುವು...

Webdesk - Ravikanth

ಬೆಳಗಾವಿ: ವಾಯವ್ಯ ಶಿಕ್ಷಕರ ‌ಮತ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ 5,091 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಅವರು ಎರಡನೇ ಸಲ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಬೆಳಗಾವಿ ನಗರದ ಜ್ಯೋತಿ ಪಿಯು ಕಾಲೇಜಿನಲ್ಲಿ ‌ನಡೆಯುತ್ತಿರುವ ಮತ ಎಣಿಕೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಆರಂಭದಲ್ಲಿಯೇ ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ 6,361 ಮತಗಳನ್ನು ಪಡೆದುಕೊಂಡಿದ್ದಾರೆ. ‌ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ 11,452 ಮತಗಳನ್ನು ಪಡೆದುಕೊಂಡಿದ್ದಾರೆ.

ವಾಯವ್ಯ ಶಿಕ್ಷಕರ‌ ಮತ ಕ್ಷೇತ್ರದಲ್ಲಿ ಒಟ್ಟು 21,402 ಮತ ಚಲಾವಣೆ ಆಗಿದ್ದವು. ಅದರಲ್ಲಿ‌ 20 ಸಾವಿರ ಮತ ಎಣಿಕೆ ಪೂರ್ಣಗೊಂಡಿದೆ. 1270 ಮತಗಳು ತಿರಸ್ಕೃತ ಗೊಂಡಿವೆ.