ಮೈಸೂರು: ಸಂಸದ ಪ್ರತಾಪ್ ಸಿಂಹ ಅವರು ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರಿಗೆ ಟಾಂಗ್ ನೀಡುವ ಬರದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ನೀಡುವ ಪ್ರಮಾಣ ಪತ್ರಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ಕಾಂಗ್ರೆಸ್ ನಾಯಕರು ಮೊದಲು ಒಳ್ಳೆಯ ಒಕ್ಕಲಿಗರಿಗೆ ಟಿಕೆಟ್ ಕೊಡಲಿ. ಇನ್ನೂ ಒಂದು ದಿನ ಅವಕಾಶ ಇದೆ. ಈಗಲಾದರೂ ಕಾಂಗ್ರೆಸ್ ಅಭ್ಯರ್ಥಿ ಬಸಲಾಯಿಸಲು ಅವಕಾಶ ಇದೆ. ಈ ಅವಕಾಶವನ್ನು ಅವರು ಬಳಸಿಕೊಳ್ಳಲಿ. ಚುನಾವಣೆ ಗೆಲ್ಲಲು ಮೊದಲು ಒಳ್ಳೆಯ ಅಭ್ಯರ್ಥಿ ಇರಬೇಕು.
ಅಲ್ಲದೇ ಇಷ್ಟು ದಿನಗಳ ಕಾಲ ಒಕ್ಕಲಿಗರನ್ನು ತುಚ್ಛವಾಗಿ ಬೈಯುತ್ತಿದ್ದ ಹೊಲಸು ಬಾಯಿಯ ವ್ಯಕ್ತಿ ನಿಮ್ಮ ಅಭ್ಯರ್ಥಿಯಾಗಿದ್ದು, ಒಕ್ಕಲಿಗರೆಂದರೆ ನೇರವಂತಿಕೆ ಗಡಸು ಸ್ವಭಾವ ಇರುತ್ತೆ. ನಿಮ್ಮ ಅಭ್ಯರ್ಥಿಗೆ ಈ ಯಾವುದಾದರು ಒಂದು ಲಕ್ಷಣ ಇದೆಯಾ? ಮೊದಲು ಅಭ್ಯರ್ಥಿ ಬದಲಾಯಿಸಿ ಆಮೇಲೆ ಗೆಲ್ಲುವುದಕ್ಕೆ ಒಕ್ಕಲಿಗರ ಕಾರ್ಡ್ ಪ್ಲೇ ಮಾಡುವಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಮ್ಮ ಅಭ್ಯರ್ಥಿ ನಾನು ಒಕ್ಕಲಿಗ ಅಂತ ಈಗ ಪ್ರಮಾಣ ಪತ್ರ ಹಿಡಿದುಕೊಂಡು ಬಂದಿದ್ದಾನೆ. ಆ ಪ್ರಮಾಣ ಪತ್ರ ಯಾವುದು?, ಕೆಎಸ್‌ಒಯುನಲ್ಲಿ ಸಿಗುತ್ತಿದ್ದ ಪ್ರಮಾಣ ಪತ್ರವೇ?’ ಎಂದು ಪ್ರಶ್ನಿಸಿದ ಅವರು ಮುಕ್ತ ವಿವಿಯ ಪ್ರಮಾಣದ ಪತ್ರಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದರು.