ಜಿಲ್ಲೆ

ಮಲ್ಲಸಂದ್ರದಲ್ಲಿ ದಾಸರಹಳ್ಳಿ ಜಿ. ಧನಂಜಯಗೌಡ ಬಿರುಸಿನ ಪ್ರಚಾರ

ಪೀಣ್ಯದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ದಾಸರಹಳ್ಳಿ ಜಿ. ಧನಂಜಯ ಗೌಡ ಅವರು ಮಲ್ಲಸಂದ್ರ ವಾರ್ಡ್​ನಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.

ಈ ವೇಳೆ ಮಾತನಾಡಿದ ಧನಂಜಯ ಗೌಡ ಅವರು, ದಾಸರಹಳ್ಳಿ ಕ್ಷೇತ್ರದಾದ್ಯಂತ ಎಲ್ಲಿ ನೋಡಿದರೂ ಹದಗೆಟ್ಟ ರಸ್ತೆಗಳು ರಾರಾಜಿಸುತ್ತಿದೆ. ಇಲ್ಲಿನ ಶಾಸಕ 5 ವರ್ಷದ ಅವಧಿಯಲ್ಲಿ ಏನನ್ನೂ ಅಭಿವೃದ್ಧಿ ಮಾಡಿಲ್ಲ. ಮಲ್ಲಸಂದ್ರದ ಕೆಲವೊಂದು ಬಡಾವಣೆಗಳಲ್ಲಿ ನೀರಿನ ಅಭಾವವಿದ್ದು, ಇಲ್ಲಿನ ಯಾವುದೇ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸಿಲ್ಲ. ಅದಕ್ಕಾಗಿ ಜನರು ಕಾಂಗ್ರೆಸ್​ನತ್ತ ಒಲವು ತೋರಿದ್ದಾರೆ ಎಂದರು.

ಮಲ್ಲಸಂದ್ರದ ಚಿತ್ರಣವನ್ನೇ ಬದಲಿಸುತ್ತೇನೆ

ನಾನು ಶಾಸಕನಾದರೆ ಐದು ವರ್ಷಗಳಲ್ಲಿ ಮಲ್ಲಸಂದ್ರದ ಚಿತ್ರಣವನ್ನೇ ಬದಲಿಸುತ್ತೇನೆ. ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿ ಬಗೆಹರಿಸಲು ಶ್ರಮಿಸುತ್ತೇನೆ ಎಂದು ತಿಳಿಸಿದರು.

ಜನರೇ ಬುದ್ಧಿ ಕಲಿಸುತ್ತಾರೆ

ಐದು ವರ್ಷಗಳ ಕಾಲ ಬರಿ ಉದ್ಘಾಟನೆಗಳನ್ನು ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ಜನರು ಅಭಿವೃದ್ಧಿ ಕಾಣದೆ ಕಂಗಾಲಾಗಿದ್ದಾರೆ. ಸುಳ್ಳು ಆರೋಪಗಳನ್ನು ಮಾಡುತ್ತಾ ಕಾಲಹರಣ ಮಾಡಿರುವ ಶಾಸಕರಿಗೆ ಜನರು ಬುದ್ಧಿ ಕಲಿಸುತ್ತಾರೆ' ಎಂದರು.

ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯ ಕೆಸಿ ಅಶೋಕ್​ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಕೆ. ನಾಗಭೂಷಣ್​ ಹಾಗೂ ಬ್ಲಾಕ್​ ಅಧ್ಯರು, ವಾರ್ಡ್​ ಅಧ್ಯರು, ಪಕ್ಷದ ಮುಖಂಡರು ಸ್ಥಳಿಯ ಗ್ರಾಮಸ್ಥರು ಕಾರ್ಯಕರ್ತರು ಉಪಸ್ಥಿತರಿದ್ದು ಬೆಂಬಲ ಸೂಚಿಸಿದರು.