ಜಿಲ್ಲೆ

ಗ್ಯಾರಂಟಿ ಎಂಬ ಬಿಸ್ಕೆಟ್‌ ಹಾಕಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌

ಶಿರಸಿ:ರಾಜ್ಯಕ್ಕೆ ಬಂದ ಬರಗಾಲವನ್ನು ಆಡಳಿತ ಪಕ್ಷ ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಂಡಿಲ್ಲ.ಅಸಮರ್ಥವಾದ ಸರ್ಕಾರ ಇದಾಗಿದೆ ಎಂದು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಅನೇಕ ವರ್ಷಗಳ ನಂತರ ಬರಗಾಲದ ಕೆಟ್ಟ ಪರಿಸ್ಥಿತಿ ನಮಗೆ ದಿದೆ.ಬರಗಾಲದ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರೀಗಣಿಸಿಲ್ಲ.ರೈತ ಪರ ಸರ್ಕಾರ ಎಂದು ಹೇಳುವ ಮುಖ್ಯಮಂತ್ರಿಗಳು ರೈತರ ಹಿತ ಪಾಡಬೇಕು.ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಇದುವರೆಗೂ ಬರ ಸಮೀಕ್ಷೆ ಮಾಡಿಲ್ಲ.ರೈತರ ಕಷ್ಟ ಸುಖಗಳನ್ನು ಆಲಿಸಲು ಬರಲಿಲ್ಲ. ಸಾರ್ವಜನಿಕರಿಗೆ ಗ್ಯಾಂರಟಿ ಎಂಬ ಬಿಸ್ಕೆಟ್ ಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದು ತಪ್ಪುಮಾಡಿದ್ದೇವೆ ಎಂದು ಜನರಿಗೆ ಮನವರಿಕೆ ಯಾಗಿದೆ. ಅನೇಕ ವರ್ಷಗಳ ನಂತರ ರಾಜ್ಯಕ್ಕೆ ಬಹಳ ಕೆಟ್ಟ ಪರಿಸ್ಥಿತಿ ಬಂದಿದೆ.ರಾಜ್ಯಾಧ್ಯAತ ಬರ ಆವರಿಸಿದ್ದು, ಜನತೆ ಗಾಲಾಗಿದ್ಧಾರೆ.ಬೆಳೆದ ಬೆಳೆಗಳೆಲ್ಲಾ ರೋಗಕ್ಕೆ ಹಾಗೂ ನೀರಿಲ್ಲದೆ ಹಾನಿಯಾಗಿದೆ.ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಮಂತ್ರಿಗಳು ಕಾರು ಖರೀದಿ, ಬಂಗಲೆ ನಿರ್ಮಾಣಕ್ಕೆ ಮಾತ್ರ ತಲೆ ಕೆಡಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮದ್ಯದ ಬೆಲೆ ಏರಿಸಿ ಆ ಹಣದಲ್ಲೇ ಗೃಹ ಲಕ್ಷ್ಮೀ ಮೂಲಕ ಮಹಿಳೆಯರಿಗೆ ಎರಡು ಸಾವಿರ ನೀಡುತ್ತಿದ್ದಾರೆ. ಸಮರ್ಥ ಅಧಿಕಾರ ನಡೆಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರ-ಬಡವರ ಅಭಿವೃದ್ದಿಗೆ ಪೂರಕ ಯೋಜನೆ ನೀಡದೆ ಸಮಯ ವ್ಯರ್ಥದ ಆಡಳಿತವನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ.
ಸಿಎಂ ಸಿದ್ದರಾಮಯ್ಯ ಕೇವಲ ಪ್ರಧಾನಿ ಮೋದಿ ಹಾಗೂ ಸಂಸದರನ್ನು ದೂರುವ ಕಾರ್ಯ ಮಾಡುತ್ತಿದ್ದಾರೆ.ಆದರೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ರಾಜ್ಯದ ಜನತೆ ಬಗ್ಗೆ ಚಿಂತನೆ ನಡೆಸುತ್ತಿಲ್ಲ.ಕೇವಲ ಗ್ಯಾರಂಟಿ ಯೋಜನೆ ಬಗ್ಗೆ ಭಾಷಣ ಮಾಡುತ್ತ ಸಮಯ ವ್ಯರ್ಥ ಮಾಡುತ್ತಿದ್ದಾರೆ.
ಪ್ರಾಮಾಣಿಕವಾಗಿ ರೈತರ ಕಣ್ಣೀರು ವರೆಸುವ ಕೆಲಸವನ್ನು ಸರ್ಕಾರ ಮಾಡಬೇಕು ಇಲ್ಲವಾದಲ್ಲಿ ಬಿಜೆಪಿ ಉಗ್ರ ಹೋರಾಟ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಮುಡಗೇರಿ ರೈತರಿಗೆ ಅನ್ಯಾಯ-ಎಕರೆಗೆ 31.65 ಲಕ್ಷ ರೂ. ನಷ್ಟ
ತಾಳಗುಪ್ಪ ಸಿದ್ದಾಪುರ ಶಿರಸಿ ರೈಲ್ವೆ ಮಾರ್ಗದ ಕುರಿತು ಸರ್ವೆ ಕಾರ್ಯಗಳು ಮುಗಿದಿದೆ. ಇಲ್ಲಿನ ಸಂಸದರು ಹಾಗೂ ನಾವು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದರು.ಶಿವಮೊಗ್ಗ ಶಾಸಕ ಚನ್ನಬಸಪ್ಪ ಪ್ರಮುಖರಾದ ಸುನೀಲ್ ಹೆಗಡೆ,ದಿನಕರ ಶೆಟ್ಟಿ, ವೆಂಕಟೇಶ್ ನಾಯ್ಕ ಸೇರಿ ಹಲವರು ಇದ್ದರು.