ಜಿಲ್ಲೆ

ಆರೋಪ ಪ್ರತ್ಯಾರೋಪದಲ್ಲಿ ಮುಳಗಿದ ಕಾಂಗ್ರೆಸ್​-ಬಿಜೆಪಿ, ಶ್ವೇತಪತ್ರ ಹೊರಡಿಸಲು ಎಚ್​ಕೆಪಿ ಆಗ್ರಹ-ಬೊಮ್ಮಾಯಿ ಕುರಿತು 'ಚಾರ್ಲೀ' ಪದ ಬಳಕೆಗೆ ಬಿಜೆಪಿ ಖಂಡನೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಚುನಾವಣಾ ಸಮೀಪಿಸುತ್ತಿದ್ದಂತೆ ವಿವಿಧ ವಿಷಯಗಳ ಕುರಿತು ಆರೋಪ ಪ್ರತ್ಯಾರೋದಲ್ಲಿ ಮುಳಗಿರುವ ಕಾಂಗ್ರೆಸ್​ ಮತ್ತು ಬಿಜೆಪಿ ಮುಖಂಡರು ಆಯಾ ಪಕ್ಷದ ನಾಯಕರ ವಿರುದ್ಧ ಉಪನಾಮ ಪದಬಳಕೆ, ವ್ಯಂಗ್ಯ ಮಾತು, ರಾಜಕೀಯ ವಿಷಯಗಳು, ಐಟಿ, ಸಿಬಿಐ ಹಾಗೂ ಇಡಿ ವಿಷಯಗಳ ಕುರಿತ ಆರೋಪಗಳಿಗೆ ಕ್ಷೇತ್ರದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಕಳೆದ ಬುಧವಾರ ಒಂದೇ ದಿನದಲ್ಲಿ ಕ್ಷೇತ್ರದಲ್ಲಿ ಅಧಿಕೃತ ಚುನಾವಣಾ ಪ್ರಚಾರಕ್ಕೆ ಮುಂದಡ್ಡಿ ಇಟ್ಟಿದ್ದ ನಾಯಕರು ಬಲ, ದುರ್ಬಲತೆ, ಕುಡಿಯುವ ನೀರು, ಇಡಿ ದುರ್ಬಳಕೆ ಕುರಿತು ಪರಸ್ಪರ ಹರಿಹಾಯ್ದಿದ್ದರು. ಶನಿವಾರ ಪ್ರತ್ಯೇಕ ಸುದ್ದಿಗೋಷ್ಟಿ ನಡೆಸುವ ಮೂಲಕ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಚಾಲನೆ ನೀಡಿದ್ದಾರೆ.
ಶ್ವೇತಪತ್ರ ಹೊರಡಿಸಿ-ಎಚ್​.ಕೆ. ಪಾಟೀಲ:
ಚುನಾವಣಾ ಬಾಂಡ್​ ವಿಚಾರವಾಗಿ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಸಚಿವ ಎಚ್​.ಕೆ. ಪಾಟೀಲ ಆಗ್ರಹಿಸಿದರು.
ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿದ ಸಚಿವ ಎಚ್​.ಕೆ. ಪಾಟೀಲ ಅವರು, ಚುನಾವಣಾ ಬಾಂಡ್​ ಹೆಸರಿನಲ್ಲಿ ಜನರನ್ನು ಶೋಷಣೆ ಮಾಡುವ ಮೂಲಕ ಅಕ್ರಮವಾಗಿ ಕೇಂದ್ರ ಸರ್ಕಾರ ಹಣ ಸಂಗ್ರಹಿಸಿದೆ. ಕಪು$್ಪ ಹಣವು ಇದರಲ್ಲಿ ಸೇರಿದೆ. ಜನರಿಗೆ ಈ ಅಕ್ರಮದ ಬಗ್ಗೆ ತಿಳಿಯಬೇಕಿದೆ. ಚುನಾವಣಾ ಆಯೋಗವು ಚುನಾವಣಾ ಬಾಂಡ್​ ಕುರಿತು ಸಾರ್ವಜನಕರಿಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ತೆರಿಗೆ ಪಾವತಿಸುವಂತೆ ಕಾಂಗ್ರೆಸ್​ ಗೆ ಐಟಿ ನೋಟಿಸ್​ ನೀಡಿದ ವಿಷಯದ ಕುರಿತು ಮಾತನಾಡಿದ ಎಚ್​.ಕೆ. ಪಾಟೀಲ, ಕೇಂದ್ರ ಸರ್ಕಾರವು ತನ್ನ ಅಂಗ ಸಂಸ್ಥೆಗಳ ಮೂಲಕ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದೆ. 1800 ಕೋಟಿ ಬಾಕಿ ತೆರಿಗೆ ಪಾವತಿಸುವಂತೆ ನೋಟೀಸ್​ ನೀಡಲಾಗಿದೆ. 10 ರಿಂದ 20 ವರ್ಷಗಳ ಹಿಂದಿನ ದಿನಾಂಕ ನಮೂದಿಸಿ ನೋಟೀಸ್​ ನೀಡುತ್ತಿರುವ ಉದ್ದೇಶವೇನು?. ಇದಲ್ಲದೇ ಇತ್ತಿಚೆಗೆ ಐಟಿ, ಇಡಿ, ಸಿಬಿಐ ದಾಳಿಗಳು ಅಧಿಕವಾಗುತ್ತಿವೆ. ದಾಳಿಗೊಳಗಾದ ನಾಯಕರು ಬಿಜೆಪಿ ಸೇರಿದ ತಕ್ಷಣ ಪ್ರಕರಣಗಳಿಗೆ ಇತಿಶ್ರೀ ಹೇಳಲಾಗುತ್ತಿದೆ. ರಾಷ್ಟ್ರ ರಾಜಕಾರಣದಲ್ಲಿ ಇದೇ ಮೊದಲು ಇಂತಹ ನಡೆಗಳನ್ನು ಕಾಣುತ್ತಿದ್ದೇವೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ದೊಡ್ಡ ಬ್ರಷ್ಟಾರದ ವ್ಯವಸ್ಥೆ ಇದಾಗಿದೆ ಎಂದು ಆರೋಪಿಸಿದರು.
ವಿಷಾಧವಿದೆ:
ಕಳೆದ ಬುಧವಾರ ತಾಲೂಕಿನ ನಾಗಾವಿ ಗ್ರಾಮದಲ್ಲಿ ಚುನಾವಣಾ ಪ್ರಾಚಾರದ ವೇಳೆ ಬಿಜೆಪಿ ಅಭ್ಯಥಿರ್ "ಬಸವರಾಜ ಬೊಮ್ಮಾಯಿ' ಅವರನ್ನು "ದಾವಣಗೆರೆ ಚಾಲಿರ್' ಎಂದು ಸಂಬೋಧಿಸಿದ್ದ ಎಚ್​.ಕೆ. ಪಾಟೀಲ ಅವರು, ತಮ್ಮ ಮಾತಿನಿಂದ ನೋವಾಗಿದ್ದರೆ ವಿಷಾಧ ವ್ಯಕ್ಯಪಡಿಸುತ್ತೇನೆ ಎಂದರು. ಚುನಾವಣಾ ಕಣದಲ್ಲಿ ಬಿಜೆಪಿಗಿಂತ ಯುವ ಕುಸ್ತಿಪಟ ಕಣದಲ್ಲಿ ಇದ್ದಾರೆ ಎಂಬ ಮಾತಿನ ತಾತ್ಪರ್ಯವಷ್ಟೇ ನನ್ನದಾಗಿತ್ತು. ಕೆಲವರು ನನ್ನ ಹೇಳಿಕೆಯನ್ನು ತಪ್ಪು ಗ್ರಹಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸ್ವಾಮೀಗಳ ಮೇಲೆ ಗೌರವ ಇರಲಿ:
ದಿಂಗಾಲೇಶ್ವರ ಶ್ರೀಗಳು ಕಾಂಗ್ರೆಸ್​ ಏಜೆಂಟ್​ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಎಚ್​.ಪಾಟೀಲರು, ಸ್ವಾಮೀಗಳ ಬಗ್ಗೆ ಲುವಾಗಿ ಮಾತನಾಡುವುದನ್ನು ಸಮಾಜ ಸಹಿಸುಹುದಿಲ್ಲ. ಅವರ ನಿಲುವುಗಳನ್ನು ಟೀಕೆ ಮಾಡಬೇಕು ವಿನಹ ವೈಯಕ್ತಿಕ ನಿಂಧನೆ ಸರಿಯಲ್ಲ. ದಿಂಗಾಲೇಶ್ವರ ಶ್ರೀಗಳಿಗೂ ಹಾಗೂ ಕಾಂಗ್ರೆಸ್​ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಬಿ.ಬಿ. ಅಸೂಟಿ, ಸಿದ್ದು ಪಾಟೀಲ, ಅಶೋಕ ಮಂದಾಲಿ ಇದ್ದರು.

ಶಿವರಾಜ ತಂಗಡಗಿ, ಯತೀಂದ್ರ ವಿರುದ್ಧ ದೂರು: ಬಿಜೆಪಿ
ಸಚಿವ ಎಚ್​.ಕೆ. ಪಾಟೀಲ ಅವರ ಸುದ್ದಿಗೋಷ್ಟಿ ಮುಗಿಯುತ್ತಿದ್ದಂತೆ ಸುದ್ದಿಗೋಷ್ಟಿ ನಡೆಸಲು ಅಣಿಯಾದ ಸ್ಥಳಿಯ ಬಿಜೆಪಿ ಸದಸ್ಯರು, ಕಾಂಗ್ರೆಸ್​ ಸಚಿವರ, ಶಾಸಕರ ಹೇಳಿಕೆ ಕುರಿತು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷಕ್ಕಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಸಚಿವ ಶಿವರಾಜ ತಂಗಡಗಿ ಹಾಗೂ ಗೃಹ ಸಚಿವ ಅಮಿತ್​ ಷಾ ಕುರಿತು ಯಂತೀಂದ್ರ ಹೇಳಿಕೆ ವಿಷಾಧನೀಯ. ಅವರು ಕೂಡಲೇ ರಾಜೀನಾಮೆ ಕೊಡಬೇಕು ಮತ್ತು ಅವರ ವಿರುದ್ಧ ಠಾಣೆಯಲ್ಲಿ ಬಿಜೆಪಿ ಜಿಲ್ಲಾ ಟಕ ದೂರುದಾಖಲಿಸಿದೆ ಎಂದರು.
ಕೇಂದ್ರ ಸರ್ಕಾರ ಭೇಟಿ ಪಡಾವೋ ಭೇಟಿ ಬಚಾವೋ, ಮುದ್ರಾ ಯೋಜನೆ, ಮೆಕ್​ ಇನ್​ ಇಂಡಿಯಾ, ಫಿಟ್​ ಇಂಡಿಯಾ, ಸೇರಿದಂತೆ ಹಲವು ಯೋಜನೆ ಜಾರಿ ತಂದಿದೆ. ಉದ್ಯೋಗ ಸೃಷ್ಟಿಯಲ್ಲಿ ಹಿಂದೆಂದಿಗಿಂತಲೂ ಬೆಳವಣಿಗಾಗಿ ಕಾಣುತ್ತಿದ್ದೇವೆ. ಕಾಂಗ್ರೆಸ್​ ಕೇವಲ ಚುನಾವಣಾ ಗಿಮಿಕ್​ ಮಾಡುತ್ತದೆ ಎಂದು ಆರೋಪಿಸಿದರು. ಬಿಜೆಪಿ ಅಭ್ಯಥಿರ್ ಬೊಮ್ಮಾಯಿ ಅವರಿಗೆ "ಚಾಲಿರ್' ಪದ ಬಳಕೆ ವಿರುದ್ಧ ಆಕ್ರೋಶ ವ್ಯಕ್ತೊಡಿಸಿದ ಸಂತೋಷ ಅಕ್ಕಿ, ನಾಲಿಗೆ ಇದೆ ಎಂದು ಎನೆನೋ ಮಾತನಾಡುವುದು ಸರಿಯಲ್ಲ. ಮತದಾರರ ಬಗ್ಗೆ ಯೋಚಿಸಿ ರಾಜಕಾರಣ ಮಾಡಬೇಕು. ನಿಮ್ಮ ನಡೆ ಯುವ ರಾಜಕಾರಣಿಗಳಿಗೆ ಮಾದರಿಯಾಗಬೇಕು ಎಂದು ಪರೋಕ್ಷವಾಗಿ ಎಚ್​.ಕೆ. ಪಾಟೀಲ ವಿರುದ್ಧ ಹರಿಹಾಯ್ದರು.
ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ ಮುಳಗುಂದ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಕಳೆದ ವರ್ಷ ಮೀಸಲಿಟ್ಟ 11 ಸಾವಿರ ಕೋಟಿ, ಪ್ರಸಕ್ತ ಸಾಲಿನಲ್ಲಿ 14 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಲಿಗೆ ಕಾಂಗ್ರೆಸ್​ ಸರ್ಕಾರ ಬಳಸಿ ಎಸ್ಸಿ, ಎಸ್ಟಿ ಜನರಿಗೆ ಮೋಸ ಮಾಡಿದೆ. ದಲಿತ, ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್​ ಪಕ್ಷಕ್ಕೆ ಮಾತನಾಡುವ ನೈತಿಕತೆ ಇಲ್ಲ. ಮಾಜಿ ಶಾಸಕ ಗೋವಿಂದ ಕಾರಜೋಳ ಅವರು ರಾಜ್ಯದಲ್ಲಿ 200 ಹಾಸ್ಟೆಲ್​ ಗಳಿಗೆ ಅನುದಾನ ವಿನಿಯೋಗಿಸಿ ಎಸ್ಸಿ ಎಸ್ಟಿ ಮಕ್ಕಳಲಿಗೆ ವಸತಿ ಸೌಲಭ್ಯ ಕಲ್ಪಿಸಿದ್ದರು. ಬಿಜೆಪಿ ಅವಧಿಯಲ್ಲೇ ಎಸ್ಸಿ, ಎಸ್ಟಿ ಅನುದಾನ ಸದ್ಭಳಕೆ ಆಗಿದೆ. ಕಾಂಗ್ರೆಸ್​ ನೈತಿಕತೆ ಕಳೆದುಕೊಂಡಿದೆ ಎಂದರು.
ಬಿಜೆಪಿ ನಗರಸಭೆ ಸದಸ್ಯ ಶಶಿಧರ ದಿಂಡೂರು ಮಾತನಾಡಿ, ಶಿವರಾಜ ತಂಗಡಗಿ ಅವರ ಪ್ರಚೋಧನಕಾರಿ ಹೇಳಿಕೆ ನೀತಿ ಸಂಹಿತೆಗೆ ಒಳಪಡುತ್ತದೆ. ಅವರನ್ನು ಪ್ರಚಾರ ಕಾರ್ಯದಿಂದ ನಿರ್ಭಂದಿಸಬೇಕು ಎಂದು ಆಗ್ರಹಿಸಿದರು.
ಅನಿಲ ಅಬ್ಬಿಗೇರಿ, ದತ್ತಣ ಜೋಶಿ ಮತ್ತುಯುವ ಮಂಡಳ ಅಧ್ಯಕ್ಷರು ಇದ್ದರು.