ಜಿಲ್ಲೆ

ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ: ಕಾರ್ಯಕಾರಿಣಿಯಲ್ಲಿ ಖಂಡನಾ ನಿರ್ಣಯ ಅಂಗೀಕಾರ

ಹೊಸಪೇಟೆ: ಸ್ವತಃ ಗೊಂದಲದಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಸರ್ವಸ್ಪರ್ಶಿ ಅಭಿವೃದ್ಧಿ ಸರ್ಕಾರವನ್ನು ಮೆಚ್ಚುವ ಬದಲಿಗೆ ಬರಿ ಟೀಕೆಗಳನ್ನೆ ಮಾಡುವ ಆತ್ಮವಂಚಕ ವಿಪಕ್ಷಗಳ ಧೋರಣೆಗೆ ಖಂಡಿಸುವ ರಾಜಕೀಯ ನಿರ್ಣಯವನ್ನು ಈ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಹೇಳಿದರು.

ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಆರ್.ಅಶೋಕ್ ಖಂಡನಾ ನಿರ್ಣಯ ಮಂಡಿಸಿದರೆ ಮಾಜಿ ಸಚಿವ ಲಕ್ಷ್ಮಣ ಸವದಿ, ಶಾಸಕ ಅಪ್ಪಚ್ಚು ರಂಜನ್ ಅನುಮೋದಿಸಿದರು.

ಭಾರತದ ಅಭಿವೃದ್ಧಿಯಲ್ಲಿ ಜಗತ್ತಿನ ಗಮನಸೆಳೆದ ನರೇಂದ್ರ ಮೋದಿಯವರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುವ ಮತ್ತೊಂದು ರಾಜಕೀಯ ನಿರ್ಣಯವನ್ನು ಈ ಸಭೆ ಅಂಗೀಕರಿಸಿತು ಎಂದು ಮಹೇಶ್ ತಿಳಿಸಿದರು.