ಜಿಲ್ಲೆ

ಪಂಚರಾಜ್ಯ ಚುನಾವಣೆಗೆ ಕಾಂಗ್ರೆಸ್ಗೆ ಕರ್ನಾಟಕ ಎಟಿಎಂ

ಗೋಪಾಲಕೃಷ್ಣ ಪಾದೂರ್

ಉಡುಪಿ: ಬೆಂಗಳೂರಿನಲ್ಲಿ ನಡೆದ ಅದಾಯ ತೆರಿಗೆ ಇಲಾಖೆ ದಾಳಿ ಕಾಂಗ್ರೆಸ್​ ಭ್ರಷ್ಟಾಚಾರ ಪರಂಪರೆಗೆ ಕರ್ನಾಟಕ ಸಾಯಾಗಿದೆ. ಪಂಚರಾಜ್ಯ ಚುನಾವಣೆಗೆ ಕಾಂಗ್ರೆಸ್​ ಕರ್ನಾಟಕದ ಜನರ ತೆರಿಗೆ ಹಣ ಬಳಕೆ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್​ ನಾಯಕ್​ ಆರೋಪಿಸಿದರು.

ಸೋಮವಾರ ಬಿಜೆಪಿ ಜಿಲ್ಲಾ ಕಚೇರಿ ಮುಂಭಾಗ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ನ ಉಚಿತ ವಿದ್ಯುತ್​ ಕೊಡುಗೆಯಿಂದ ಕರ್ನಾಟಕ ಕತ್ತಲೆಗೆ ಹೋಗುತ್ತಿದೆ. ಮೈಸೂರು ದಸರಾ ಕಾರ್ಯಕ್ರಮದಲ್ಲಿ ಕಲಾವಿದರಿಂದಲೂ ಲಂಚ ಪಡೆಯಲಾಗುತ್ತಿದೆ. ಮುಂದಿನ ಪೀಳಿಗೆಗೆ ಕರ್ನಾಟಕ ಉಳಿಯಬೇಕಾದರೆ ಕಾಂಗ್ರೆಸ್​ ತೊಲಗಬೇಕು ಎಂದು ಹೇಳಿದರು.

ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್​ ರತ್ನಾಕರ ಹೆಗ್ಡೆ ಮಾತನಾಡಿ, ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸರ್ಕಾರದ ಬಳಿ ಹಣವಿಲ್ಲ. ನೌಕರರ ವೇತನ ತಡೆ ಹಿಡಿಯಲಾಗಿದೆ. ಅಂಗನವಾಡಿ ಮಕ್ಕಳಿಗೂ ಆಹಾರ ಪೂರೈಸಲು ಸರ್ಕಾರ ಅಸಮರ್ಥವಾಗಿದೆ. ಕೋಟಿ ಕೋಟಿ ಹಣವನ್ನು ಲೂಟಿಗೈದು ಪಂಚರಾಜ್ಯಗಳ ಚುನಾವಣೆಗೆ ಬಳಸುವ ಹುನ್ನಾರ ನಡೆಸಿರುವುದು ನಾಚಿಕೆಗೇಡು. ಕರ್ನಾಟಕವನ್ನು ಎಟಿಎಂ ರೀತಿ ಬಳಸುತ್ತಿರುವ ಕಾಂಗ್ರೆಸ್​ ಸರಕಾರವನ್ನು ಕಿತ್ತೊಗೆಯಲು ಜನತೆ ಒಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್​, ಮುಖಂಡರಾದ ರವಿ ಅಮೀನ್​, ಪ್ರಕಾಶ್​ ಶೆಟ್ಟಿ ಪಾದೆಬೆಟ್ಟು, ಸದಾನಂದ ಉಪ್ಪಿನಕುದ್ರು, ಅಂಡಾರು ದೇವಿ ಪ್ರಸಾದ್​ ಶೆಟ್ಟಿ, ಸತ್ಯಾನಂದ ನಾಯಕ್​, ಶಿವಕುಮಾರ್​ ಅಂಬಲಪಾಡಿ, ಗಿರೀಶ್​ ಅಂಚನ್​, ಪ್ರವಿಣ್​ ಕುಮಾರ್​ ಗುರ್ಮೆ, ದಾವೂದ್​ ಅಬೂಬಕ್ಕರ್​, ಮಂಜುನಾಥ್​ ಮಣಿಪಾಲ, ದಿನೇಶ್​ ಅಮೀನ್​, ಗೋಪಾಲಕೃಷ್ಣ್ಣ ರಾವ್​ ಮಟ್ಟು, ಅರುಣ್​ ಕುಮಾರ್​ ಶೆಟ್ಟಿ, ರೋಶನ್​ ಶೆಟ್ಟಿ,
ಲೋಕಯ್ಯ ಪಣಿಯಾಡಿ, ದಿನಕರ ಪೂಜಾರಿ, ನೀರಜಾ ಶೆಟ್ಟಿ, ಲಕ್ಷ್ಮೀ ಹೆಬ್ಬಾಳ್​, ರಾಧಿಕಾ, ನಿತಿನ್​ ಪೈ, ಶಿವರಾಮ ಕಾಡಿಮಾರ್​, ಚಂದ್ರಶೇಖರ್​ ಪ್ರಭು ಮೊದಲಾದವರು ಉಪಸ್ಥಿತರಿದ್ದರು.