ಜಿಲ್ಲೆ

ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಸೋಲು: ಎಸ್‌ಬಿಇಟಿ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ವಿದ್ಯಾರ್ಥಿಗಳಲ್ಲಿ ಪಠ್ಯದ ಕಲಿಕಾಸಕ್ತಿ ಹೆಚ್ಚಿಸುವಲ್ಲಿಯೂ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಂತಹ ಸೋಲೇ ಎದುರಾದರೂ ಅದನ್ನು ಎದುರಿಸಿ ನಿಲ್ಲುವ ಆತ್ಮಸ್ಥೈರ್ಯವನ್ನು ಮಕ್ಕಳಲ್ಲಿ ಬೆಳೆಸುತ್ತದೆ ಎಂದು ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅಭಿಪ್ರಾಯಿಸಿದರು.

ಶಾಲಾ ಶಿಕ್ಷಣ ಇಲಾಖೆ ಹಾಗೂ ಕಾವೇರಿ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಕ್ರೆಡಾಕೂಟದಲ್ಲಿ ಬಹುಮಾನ ಪಡೆದ ಮಾಂಡವ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ನಗರದ ಹೊರವಲಯದ ಕ್ಯಾಂಪಸ್‌ನಲ್ಲಿ ಗುರುವಾರ ಅಭಿನಂದಿಸಿ ಮಾತನಾಡಿದರು.

ಎಸ್‌ಬಿಇಟಿ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ, ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್, ವಿಜ್ಞಾನ ವಿಭಾಗದ ಶೈಕ್ಷಣಿಕ ಪಾಲುದಾರರಾದ ಎಂ.ಅವಿನಾಶ್, ಡಿ.ಎಸ್.ರಾಘವೇಂದ್ರ, ಡಾ.ಎಂ.ಪಿ.ಮೋಹನ್, ವಾಣಿಜ್ಯ ವಿಭಾಗದ ಶೈಕ್ಷಣಿಕ ಪಾಲುದಾರರಾದ ಪಿ.ಚನ್ನೇಶ್, ಎಂ.ಎಸ್.ಅರ್ಚನಾ, ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಎಸ್.ಉಮೇಶ್ ಇತರರಿದ್ದರು.

ಬಹುಮಾನ ವಿಜೇತರು: 100 ಮೀ ಮತ್ತು 200 ಮೀಟರ್ ಓಟ ದರ್ಶನ್(ಪ್ರ) ಮತ್ತು ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಬಾಲಕರ ವಿಭಾಗದ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. 3000 ಮೀಟರ್ ಓಟ ಡಿ.ಬಿ.ಕಿಶನ್‌ಗೌಡ(ಪ್ರ), 5 ಸಾವಿರ ಮೀಟರ್ ನಡಿಗೆ ಕುಮಾರಸ್ವಾಮಿ(ಪ್ರ), ಚಕ್ರಎಸೆತ ಯಶವಂತಾಚಾರಿ(ಪ್ರ) ಮತ್ತು ಹ್ಯಾಮರ್ ಎಸೆತ(ತೃ), 110 ಮೀ ಹರ್ಡಲ್ಸ್ನಲ್ಲಿ ಫ್ರಾನ್ಸಿಸ್ ಯುತಿಕ್(ಪ್ರ), ತ್ರಿವಿಧ ಜಿಗಿತದಲ್ಲಿ ಯಶಸ್ ಆರ್.ಗೌಡ(ತೃ), 4*100 ಮೀಟರ್ ರಿಲೇ ದರ್ಶನ್ ಮತ್ತು ತಂಡ(ದ್ವಿ) ಹಾಗೂ ಕಬಡ್ಡಿಯಲ್ಲಿ ಆದಿತ್ಯ ಮತ್ತು ತಂಡ(ದ್ವಿ) ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿ 100 ಮೀಟರ್ ಓಟ ಫ್ರೋರೀನಾ ಸಂಜನಾ(ಪ್ರ), 200 ಮೀಟರ್(ಪ್ರ), ಉದ್ದ ಜಿಗಿತ(ಪ್ರ) ಸ್ಥಾನ ಹಾಗೂ 1500 ಮೀ ಓಟ, 3000 ಮೀ ಓಟ ಹಾಗೂ 4 ಕಿ.ಮೀ ಗುಡ್ಡಗಾಡು ಓಟ ಮಂದಾರೆ ಮಿತ್ರೆ(ಪ್ರ) ಸ್ಥಾನ ಪಡೆಯುವುದರ ಮೂಲಕ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಗುಂಡು ಎಸೆತ ಧನುಶ್ರೀ(ಪ್ರ) ಮತ್ತು ಹ್ಯಾಮರ್ ಎಸೆತ(ದ್ವಿ), 4 ಕಿ.ಮೀ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ದೀಪಶ್ರೀ(ದ್ವಿ) ಮತ್ತು 800 ಮೀ ಓಟದಲ್ಲಿ (ತೃ)ಸ್ಥಾನ, ಫ್ರೋರೀನಾ ಸಂಜನಾ ತಂಡ 4*100 ರಿಲೇ ಸ್ಪರ್ಧೆಯಲ್ಲಿ (ಪ್ರ), ದೀಪಶ್ರೆ ತಂಡ 4*400 ರಿಲೇ ಸ್ಪರ್ಧೆಯಲ್ಲಿ (ತೃ), ವಿದ್ಯಾಶ್ರೀ ಮತ್ತು ತಂಡ ಬಾಲ್‌ಬ್ಯಾಡ್ಮಿಂಟನ್‌ನಲ್ಲಿ(ದ್ವಿ) ಸ್ಥಾನ ಪಡೆದಿದ್ದಾರೆ.