ಜಿಲ್ಲೆ

ಯುವಕರಿಗೆ ಮಹದೇವು ಮಾದರಿ: ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಶ್ಲಾಘನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಅವರು ಬದುಕು ಯುವಶಕ್ತಿಗೆ ಮಾದರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ರೈತ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವ-50 ‘ಸಿಂಹಾವಲೋಕನ ಚಿಂತನ ಮಂಥನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹುಕಾರ್ ಚೆನ್ನಯ್ಯ, ಕೆ.ವಿ.ಶಂಕರಗೌಡ ಅವರು ಮಂಡ್ಯಕ್ಕೆ ಗೌರವ ತಂದುಕೊಟ್ಟ ಮಹನೀಯರು. ಅವರ ನಂತರವೂ ಕೂಡ ಇಂದಿಗೂ ಸಾಕಷ್ಟು ಯುವ ಪ್ರತಿಭೆಗಳು ನಮ್ಮೊಡನೆದ್ದು, ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಜನಪರ ಕಾಳಜಿಯಿಂದ ಅನೇಕ ಯುವಶಕ್ತಿ ಕಾರ್ಯ ನಿರ್ವಹಿಸುತ್ತಿದೆ. ಅವರು ಮುಂದೆ ಬರಬೇಕೆಂದು ಕರೆ ನೀಡಿದರು.

ಕಾರಸವಾಡಿ ಮಹದೇವು ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಅವರ ಪುತ್ರನ ಅಕಾಲಿಕ ಮರಣದಿಂದ ತೀವ್ರ ನೋವು ಅನುಭವಿಸಿದ್ದಾರೆ. ಹೋರಾಟಗಾರನಿಗೆ ನೋವು ನಲಿವು ಸಹಜ. ಇದನ್ನು ಮೀರಿ ನಿಂತು ಮಹದೇವ ಇನ್ನಷ್ಟು ಯುವಶಕ್ತಿಗಳಿಗೆ ಪ್ರೇರಕವಾಗಿ ಮುನ್ನಡೆಯಲಿ ಎಂದು ಆಶಿಸಿದರು.

ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದ ಸ್ವಾಮೀಜಿ, ಶಾಸಕ ರವಿಕುಮಾರ್ ಗಣಿಗ, ಯುವ ಚಿಂತಕ ಕುಮಾರ್‌ಕೊಪ್ಪ, ಒಡನಾಡಿ ಸಮಿತಿ ಅಧ್ಯಕ್ಷ ಅಶೋಕ್ ಜಯರಾಮ್, ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ವಿನಯ್ ರಾಮಕೃಷ್ಣ, ಡಿ.ಪಿ.ಸ್ವಾಮಿ ಇತರರಿದ್ದರು.