ಜಿಲ್ಲೆ

ಕನ್ನಡಕ್ಕಾಗಿ ಕರವೇ ನಿರಂತರ ಹೋರಾಟ: ಜಿಲ್ಲಾಧ್ಯಕ್ಷ ಕೆ.ಆರ್.ಪೇಟೆ ವೇಣು ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಕರ್ನಾಟಕ ರಕ್ಷಣಾ ವೇದಿಕೆ ಹೋರಾಟದಿಂದ ಸಾಕಷ್ಟು ಕನ್ನಡಪರ ಕೆಲಸ ಕಾರ್ಯಗಳು ರೂಪುಗೊಂಡಿವೆ ಎಂದು ಕರವೇ ಜಿಲ್ಲಾಧ್ಯಕ್ಷ ಕೆ.ಆರ್.ಪೇಟೆ ವೇಣು ಹೇಳಿದರು.

ನಗರದಲ್ಲಿ ಕರವೇ ಜಿಲ್ಲಾ ಘಟಕ ಆಯೋಜಿಸಿದ್ದ ಪದಾಧಿಕಾರಿಗಳ ಆಯ್ಕೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕನ್ನಡಿಗರಿಗೆ ಒಂದು ಸೂಕ್ತ ಭದ್ರತೆ, ಅನ್ಯಾಯದ ವಿರುದ್ದ ಧ್ವನಿ ಏತ್ತಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಸೇವಾಕಾರ್ಯ ಅನನ್ಯ. ಇತರ ಸಂಘಟನೆಗಳಿಗೆ ಹೊಸ ಚೈನತ್ಯ ನೀಡಿದಂತಾಗಿದೆ. ಕರವೇ ಮಹಿಳಾ ಘಟಕವು ಉತ್ತಮವಾಗಿ ನಾಡು, ನುಡಿ, ನೆಲ, ಜಲ ರಕ್ಷಣೆ ಸಹಕಾರ ನೀಡುತ್ತಿದ್ದಾರೆ. ಅದೇ ರೀತಿ ಮಂಡ್ಯ ಜಿಲ್ಲೆಯಲ್ಲಿಯೂ ಮಹಿಳಾ ಪದಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದರು.

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಶ್ವೇತಾ ಮೋಹನ್ ಇತರರಿದ್ದರು. ಮಂಡ್ಯ ತಾಲೂಕು ಘಟಕ ಅಧ್ಯಕ್ಷರಾಗಿ ಎಸ್.ಎನ್.ತೇಜಸ್‌ಕುಮಾರ್ ಮತ್ತು ಜಿಲ್ಲಾ ಮಹಿಳಾ ಘಟಕದ ಗೌರವಾಧ್ಯಕ್ಷರಾಗಿ ಸುಜಾತಾಕೃಷ್ಣ ಅವರನ್ನು ನೇಮಕ ಮಾಡಲಾಯಿತು.