ಮೈಸೂರು: 2022-23ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಮತ್ತು ಪುರುಷರ ಕರಾಟೆ ಪಂದ್ಯಾವಳಿಯಲ್ಲಿ ಒಂದು ಚಿನ್ನ ಸೇರಿದಂತೆ ಮೂರು ಪದಕ ಗಳಿಸಿರುವ ಮೈಸೂರು ವಿವಿ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.
ಪ್ರಭಾರ ಕುಲಪತಿ ಪ್ರೊ.ಎಚ್.ರಾಜಶೇಖರ್, ಕುಲಸಚಿವರಾದ ವಿ.ಆರ್.ಶೈಲಜಾ, ಡಾ.ಸಂಗೀತಾ ಗಜಾನನ ಭಟ್, ಡಾ.ಪಿ.ಕೃಷ್ಣಯ್ಯ, ಶಿವದಾಸ್, ಸಿದ್ದರಾಜು, ಜಸ್ವಂತ್ ಇತರರಿದ್ದಾರೆ.