ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಕೆ.ಎಂ.ಉದಯ ಅವರನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಅಭಿನಂದಿಸಲಾಯಿತು. ಸಿ.ಜೆ.ಗೌರಿಶಂಕರ, ಎಚ್.ಬಿ.ಸ್ವಾಮಿ, ಎಂ.ವೀರಭದ್ರಸ್ವಾಮಿ, ಮಹೇಶ್, ಮಧುಸೂದನ್, ಎ.ಎಸ್.ಮಹದೇವಸ್ವಾಮಿ ಇದ್ದರು. 
ಜಿಲ್ಲೆ

ಶಾಸಕರಿಗೆ ವೀರಶೈವ ಲಿಂಗಾಯತ ಸಮಾಜದಿಂದ ಅಭಿನಂದನೆ

ಮದ್ದೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಕೆ.ಎಂ.ಉದಯ ಅವರನ್ನು ಮದ್ದೂರು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮದ್ದೂರು ತಾಲೂಕು ಘಟಕದ ಅಧ್ಯಕ್ಷ ಸಿ.ಜಿ.ಗೌರಿಶಂಕರ ಮಾತನಾಡಿ, ಪಟ್ಟಣದಲ್ಲಿರುವ ವೀರಶೈವ ಲಿಂಗಾಯತ ಜನಾಂಗದ ಸ್ಮಶಾನ (ರುದ್ರಭೂಮಿ)ಕ್ಕೆ ನೀರಿನ ವ್ಯವಸ್ಥೆ, ಬೋರ್‌ವೆಲ್ ಕೊರೆಸಿಕೊಡಬೇಕು. ಸ್ಮಶಾನಕ್ಕೆ ರಸ್ತೆ, ಕಾಂಪೌಂಡ್ ಮತ್ತು ಗೇಟ್ ವ್ಯವಸ್ಥೆ, ಜನಗಳು ಕೂರಲು ಸಿಮೆಂಟ್ ಆಸನಗಳ ನಿರ್ಮಾಣ, ಶೇಡ್ ರಿಪೇರಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದರು.

ತಾಲೂಕಿನಲ್ಲಿ ವೀರಶೈವ ಲಿಂಗಾಯತ ಜನಾಂಗದವರು 22 ಸಾವಿರ ಜನಸಂಖ್ಯೆ ಇದ್ದು, ತಾಲೂಕು ಕೇಂದ್ರವಾದ ಮದ್ದೂರಿನಲ್ಲಿ ಜನಾಂಗದ ಶ್ರೇಯೋಭಿವೃದ್ಧಿಗೆ ಯಾವುದೇ ನಿವೇಶನ(ಬಸವ ಭವನ) ಇಲ್ಲದೆ ಜನಾಂಗದವರು ಅನಿವಾರ್ಯವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಬರುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಆದ್ದರಿಂದ ತಮ್ಮ ಶಾಸಕರ ನಿಧಿ ಅನುದಾನದಲ್ಲಿ ತಾಲೂಕು ಕೇಂದ್ರದಲ್ಲಿ ನಿವೇಶನ ಮಂಜೂರು ಮಾಡಿಕೊಟ್ಟು ಬಸವನ ಭವನ ನಿರ್ಮಿಸಿಸಿಕೊಡುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಶಾಸಕ ಕೆ.ಎಂ.ಉದಯ ಅವರು, ಶೀಘ್ರವಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಎಚ್.ಬಿ.ಸ್ವಾಮಿ, ಮಾಜಿ ಉಪಾಧ್ಯಕ್ಷ ಎಂ.ವೀರಭದ್ರಸ್ವಾಮಿ, ವೀರಶೈವ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಹೇಶ್, ಲಾಯರ್ ಮಧುಸೂದನ್ ಮುಖಂಡರಾದ ಎಂ.ಎಸ್.ಮಹದೇವಸ್ವಾಮಿ, ಎಂ.ಎನ್.ಬಸವರಾಜು, ಪಿ.ರಾಜಶೇಖರ್, ಗಿರಿ ಮಾದು, ಸುಧಾಕರ್, ಪ್ರಕಾಶ, ಪ್ರದೀಪ್, ಮಡೇನಹಳ್ಳಿ ಪ್ರಸಾದ್, ದೀಪಕ್, ಹಿರೇಮಠ ವೀರಶೈವ ಮುಖಂಡರು ಇದ್ದರು.