ಕೆ.ಎಂ.ದೊಡ್ಡಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಮೆಳ್ಳಹಳ್ಳಿ ಗ್ರಾಮದ ಅನಿತಾ ರಾಜಣ್ಣ ಆಯ್ಕೆಯಾದ ಹಿನ್ನೆಲೆಯಲ್ಲಿ ಮಧು ಜಿ.ಮಾದೇಗೌಡ ಅವರನ್ನು ಭಾರತೀ ವಿದ್ಯಾ ಸಂಸ್ಥೆಯ ಆಡಳಿತ ಕಚೇರಿಯಲ್ಲಿ ಅಭಿನಂದಿಸಿದರು. 
ಜಿಲ್ಲೆ

ಮಧು ಜಿ.ಮಾದೇಗೌಡಗೆ ಅಭಿನಂದನೆ

ಶಿವಶಂಕರ್ ಎಂ. ಹೆಬ್ಬಳ್ಳ

ಕೆ.ಎಂ.ದೊಡ್ಡಿ : ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೆಳ್ಳಹಳ್ಳಿ ಗ್ರಾಮದ ಅನಿತಾ ರಾಜಣ್ಣ ಅವರು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರನ್ನು ಭಾರತೀ ವಿದ್ಯಾ ಸಂಸ್ಥೆಯ ಆಡಳಿತ ಕಚೇರಿಯಲ್ಲಿ ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿದ ಎಂಎಲ್ಸಿ ಮಧು ಜಿ. ಮಾದೇಗೌಡ ಮಾತನಾಡಿ, ಭಾರತೀನಗರ ಗ್ರಾಮ ಪಂಚಾಯಿತಿ ಎ ಗ್ರೇಡ್ ಸ್ಥಾನ ಪಡೆದಿದ್ದು ಅದಕ್ಕೆ ನೂತನವಾಗಿ ಅನಿತಾ ರಾಜಣ್ಣ ಆಯ್ಕೆಯಾಗಿದ್ದಾರೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಗೆ ಶ್ರಮಿಸಿ ಎಂದು ಕಿವಿ ಮಾತು ಹೇಳಿದರು.

ತಮ್ಮ ಅಧಿಕಾರವಧಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಗೆ ನಾನು ಸಹ ನೆರವಾಗುತ್ತಿದ್ದು ಗ್ರಾಮಗಳ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವ ಮೂಲಕ ಜನರಿಗೆ ಗ್ರಾಮ ಪಂಚಾಯಿತಿಯಿಂದ ಸಿಗುವ ಸೌಲತ್ತುಗಳನ್ನು ಒದಗಿಸಬೇಕು ಎಂದರು.

ಬಳಿಕ ನೂತನ ಅಧ್ಯಕ್ಷೆ ಅನಿತಾ ರಾಜಣ್ಣ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಶಕ್ತಿ ಮೀರಿ ಶ್ರಮಿಸಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.

ಭಾರತೀ ವಿದ್ಯಾ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಕಾಂಗ್ರೆಸ್ ಮುಖಂಡ ಆಶಯ್ ಮಧು ಅವರನ್ನು ಸಹ ನೂತನ ಅಧ್ಯಕ್ಷೆ ಅನಿತಾ ರಾಜಣ್ಣ ಮತ್ತು ಗ್ರಾ.ಪಂ ಸದಸ್ಯರು, ಮುಖಮಡರು ಅಭಿನಂಧಿಸಿದರು.

ಗ್ರಾ.ಪಂ. ಉಪಾಧ್ಯಕ್ಷೆ ಸುವರ್ಣಾ, ಸದಸ್ಯರಾದ, ಕೆ.ಟಿ.ಶ್ರೀನಿವಾಸ್, ಪುಟ್ಟರಾಮು, ಕೆ.ವಿ.ಶ್ರೀನಿವಾಸ್, ವಿನಯ್ ಹೊನ್ನೇಗೌಡ, ಎಂ.ಪಿ.ರವಿಚಂದ್ರ, ವಕ್ರತುಂಡ ವೆಂಕಟೇಶ್, ಮಣಿಗೆರೆ ರಾಮಚಂದ್ರೇಗೌಡ, ಮಿಥುನ್‌ಕುಮಾರ್, ಸೌಭಾಗ್ಯಮ್ಮ, ಕೌಸಲ್ಯಾ, ಸೌಭಾಗ್ಯಾ ಕಬ್ಬಾಳಯ್ಯ, ಮಂಜುನಾಥ್, ಗೌರಮ್ಮ, ಸೌಮ್ಯಾ, ಭಾರತಿ, ಮಹದೇವಮ್ಮ, ಮುಖಂಡರಾದ ಮೆಳ್ಳಹಳ್ಳಿ ರಾಜಣ್ಣ, ಶ್ರೀನಿವಾಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.