ಜಿಲ್ಲೆ

ಮಧು ಜಿ.ಮಾದೇಗೌಡಗೆ ಅಭಿನಂದನೆ

Mysuru - Desk - Naveen Kumar H P


ಕೆ.ಎಂ.ದೊಡ್ಡಿ : ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಮಂಚಮ್ಮ ದೇವಿ ದೇವಾಲಯಕ್ಕೆ ಅನುದಾನ ಮಂಜೂರು ಮಾಡಿರುವ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರಿಗೆ ಇಲ್ಲಿನ ಭಾರತೀ ಎಜುಕೇಷನ್ ಟ್ರಸ್ಟ್ ಆಡಳಿತ ಕಚೇರಿಯಲ್ಲಿ ಶ್ರೀ ಮಂಚಮ್ಮ ದೇವಿ ದೇವಸ್ಥಾನ ಟ್ರಸ್ಟ್ ಮತ್ತು ಕಲ್ಲಹಳ್ಳಿ ಗ್ರಾಮಸ್ಥರು ಅಭಿನಂದಿಸಿದರು.


ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಮಂಚಮ್ಮ ದೇವಿ ದೇವಾಲಯದ ಕಾಮಗಾರಿಗೆ ಶಾಸಕರ ಅನುದಾನದಿಂದ 5 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿ ಪ್ರಥಮ ಕಂತಿನಲ್ಲಿ 2.50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿರುವ ಶಾಸಕ ಮಧು ಜಿ.ಮಾದೇಗೌಡರಿಗೆ ಕೃತಜ್ಞತೆ ಸಲ್ಲಿಸಲಾಯಿತು. ನ.8ರಂದು ಲೋಕಾರ್ಪಣೆಗೊಳ್ಳಲಿರುವ ದೇವಾಲಯ ಜೀರ್ಣೋದ್ಧಾರಕ್ಕೆ ಆಗಮಿಸುವಂತೆ ಮನವಿ ಮಾಡಲಾಯಿತು.


ಟ್ರಸ್ಟ್ ಅಧ್ಯಕ್ಷ ಕೆ.ಎನ್.ರಾಮಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಆನಂದ, ಖಜಾಂಚಿ ಕೆ.ಜಿ.ಮೋಹನ್ ಕುಮಾರ್, ಆರ್‌ಎಪಿಸಿಎಂಎಸ್ ನಿರ್ದೇಶಕ ಕೆ.ಸಿ.ರವೀಂದ್ರ, ಗ್ರಾಮಸ್ಥರಾದ ಸೋಮಣ್ಣ, ವರದರಾಜು, ಕೆ.ಸಿ.ಮಂಜುನಾಥ್, ನಾಗಲಿಂಗೇಗೌಡ, ಪುಟ್ಟಲಿಂಗೇಗೌಡ ಸೇರಿದಂತೆ ಇತರರು ಇದ್ದರು.