ಜಿಲ್ಲೆ

ಲೀಲಪ್ಪ ಶೇರಿಗಾರ್‌ಗೆ ಅಭಿನಂದನೆ

ಮೂಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 10ನೇ ತೋಕೂರು ಗ್ರಾಮದ ಲೈಟ್‌ಹೌಸ್‌ನಲ್ಲಿ ವಾಸ್ತವ್ಯವಿರುವ ಲೀಲಪ್ಪ ಶೇರಿಗಾರ್ ಅವರನ್ನು ಪಡುಪಣಂಬೂರು ಗ್ರಾಮ ಪಂಚಾಯಿತಿ ವತಿಯಿಂದ ಅವರ ಮನೆಯಲ್ಲಿ ಅಭಿನಂದಿಸಲಾಯಿತು.

ಅವರು ನಾದಸ್ವರ ಹಾಗೂ ಸ್ಯಾಕ್ಸೋಫೋನ್ ವಾದನದಲ್ಲಿ ಮಾಡಿದ ಸಾಧನೆಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ 2024ರ ‘ಮಹಾತ್ಮ ಜ್ಯೋತಿಬಾಪುಲೆ ಫೆಲೋಶಿಪ್ ನ್ಯಾಶನಲ್ ಅವಾರ್ಡ್’ ಎಂಬ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿರುವ ಪ್ರಯುಕ್ತ ಲೀಲಪ್ಪ ಶೇರಿಗಾರ್ ಅವರನ್ನು ಅಭಿನಂದಿಸಲಾಯಿತು.

ಪಡುಪಣಂಬೂರು ಗ್ರಾಪಂ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಉಪಾಧ್ಯಕ್ಷ ಹೇಮನಾಥ ಅಮೀನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನೋದ್ ಬೊಳ್ಳೂರು, ಪಂಚಾಯಿತಿ ಸದಸ್ಯರಾದ ಮೋಹನದಾಸ್, ಸಂತೋಷ್, ಅನಿಲ್ ಯಾನೆ ಸೀತಾರಾಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧೀರ್, ಸಿಬ್ಬಂದಿ ದಿನಕರ್ ಉಪಸ್ಥಿತರಿದ್ದರು.