ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪಲಿತಾಂಶದಲ್ಲ್ಲಿ 625 ಕ್ಕೆ 624 ಅಂಕ ಗಳಿಸಿ ದ ವಿದ್ಯಾರ್ಥಿನಿ ಹಂಸಾ ಅವರನ್ನು ಶಾಸಕ ಎಚ್.ಕೆ.ಸುರೆಶ್ ಇತರರು ಅಭಿನಂದಿಸಿದರು. 
ಜಿಲ್ಲೆ

624 ಅಂಕ ಗಳಿಸಿದ ಹಂಸಾಗೆ ಅಭಿನಂದನೆ

ಬೇಲೂರು: 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲ್ಲಿ 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆ ಮತ್ತು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪಟ್ಟಣದ ವಿದ್ಯಾರ್ಥಿನಿ ಹಂಸಾ ಅವರನ್ನು ಭಾನುವಾರ ಸಂಜೆ ಅವರ ಸ್ವಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಶಾಸಕ ಎಚ್.ಕೆ.ಸುರೇಶ್ ಅಭಿನಂದಿಸಿದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಮಕ್ಕಳಿಗೆ ವಿದ್ಯೆಯೇ ಸಂಪತ್ತಾಗಿದ್ದು, ಅಂತ ವಿದ್ಯೆಗೆ ಮಹತ್ವವನ್ನು ನೀಡುವ ಮೂಲಕ ಉತ್ತಮ ಫಲಿತಾಂಶ ಪಡೆಯುವಲ್ಲಿ ಶ್ರಮ ವಹಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನದೊಂದಿಗೆ ಹಾಸನ ಜಿಲ್ಲೆಗೆ ಗೌರವ ತಂದು ಕೊಟ್ಟಂತಹ ಪಟ್ಟಣದ ಶಾಂತೇಗೌಡರ ಮಗಳ ಸಾಧನೆ ಶ್ಲಾಘನೀಯ. ಇತರರಿಗೂ ಮಾದರಿ. ಇವರ ಸಾಧನೆ ತಾಲೂಕಿನ ಕೀರ್ತಿ ಹೆಚ್ಚಿಸಿದೆ ಎಂದರು.

ಪಾಲಕರು ತಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಲೆಂದು ಹಂಬಲಿಸುತ್ತಾರೆ. ನಿತ್ಯವು ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಬದುಕನ್ನೇ ಮೀಸಲಿಡುತ್ತಾರೆ. ಮಕ್ಕಳಿಗಾಗಿ ಸದಾ ಕಷ್ಟಪಡುವ ಪಾಲಕರ ಮನಸನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಗೌರವ ಉಳಿಸುವ ಕೆಲಸ ಮಾಡಬೇಕು. ವಿದ್ಯಾರ್ಥಿನಿಯ ಸಾಧನೆಗೆ ಟೊಂಕ ಕಟ್ಟಿ ನಿಂತ ತಂದೆ ಶಾಂತೇಗೌಡ ಹಾಗೂ ತಾಯಿ ಜ್ಯೋತಿ ಅವರಿಗೆ ಅಭಿನಂದನೆಗಳು ಎಂದರು.

ಹಂಸಾ ಅವರ ತಂದೆ ಶಾಂತೇಗೌಡ, ಬಿಜೆಪಿ ಮಂಡಲದ ಅಧ್ಯಕ್ಷ ಸಂಜಯ್ ಕೌರಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಾ.ನ.ಮಂಜೇಗೌಡ, ಗೌರವ ಕಾರ್ಯದರ್ಶಿ ಮಹೇಶ್, ಉಪಾಧ್ಯಕ್ಷರದ ಚಂದ್ರು, ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ ಇತರರಿದ್ದರು.