- ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಸಾಗರದಲ್ಲಿರುವ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚಕ್ರಧರ್ ಅವರು 2023 ನೇ ಸಾಲಿನ ಕೇಂದ್ರ ಲೋಕ ಸೇವಾ ಆಯೋಗ ಪರೀಕ್ಷೆಯಲ್ಲಿ 117 ರ‌್ಯಾಂಕ್ ಪಡೆದು ಎಎಫ್‌ಎಸ್ ಆಗಿ ಆಯ್ಕೆಯಾಗಿದ್ದಾರೆ.
ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅನಕಲ್ ಶೆಟ್ಟಿಹಳ್ಳಿ ಗ್ರಾಮದ ಕೃಷಿಕ ಬಿ.ಶ್ರೀನಿವಾಸ ರೆಡ್ಡಿ ಅವರ ಪುತ್ರರಾದ ಚಕ್ರಧರ್ ಅವರು 2019 ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ‌್ಯಾಂಕ್ ಪಡೆದು ಕೆ.ಆರ್.ಸಾಗರದ ಕರ್ನಾಟಕ ಇಂಜಿನಿರಿಂಗ್ ಸಂಶೋಧನ ಕೇಂದ್ರದ ಸಹಾಯಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ನಾಟಕ ಇಂಜಿನಿರಿಂಗ್ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಕೆ.ಜೆ.ಮಹೇಶ್ ಕುಮಾರ್ ಅವರನು ಚಕ್ರಧರ್ ಅವರನ್ನು ಅಭಿನಂದಿಸಿದರು.