ನಾಪೋಕ್ಲು: ದೆಹಲಿಯಲ್ಲಿ ಆ.15ರಂದು ನಡೆಯುವ ಸ್ವಾತಂತ್ರೊೃೀತ್ಸವಕ್ಕೆ ರಾಯಭಾರಿಯಾಗಿ ಆಯ್ಕೆ ಆಗಿರುವ ಯಶಸ್ವಿ ರೈ ಅವರನ್ನು ಕಾಂತೂರು ಗ್ರಾಮ ಪಂಚಾಯಿತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷ ಕುಶನ್ ರೈ, ಉಪಾಧ್ಯಕ್ಷೆ ಬಿ. ಎಸ್.ರೇಖಾ, ಪಿಡಿಒ ಚಂದ್ರಮೌಳಿ, ಸದಸ್ಯರಾದ ವಿಜು ತಿಮ್ಮಯ, ಸೌಮ್ಯಾ ಸತೀಶ್, ರೀತಾ ಸುದರ್ಶನ್, ಸುಮಾ ಸುಂದರಿ, ಪುಷ್ಪಾ, ದಿವ್ಯಾ ಮಿತ್ತೂರ್, ಯಶ್ವಿನ್, ರಘು. ಹೀರಾ ಸುಬ್ಬಯ್ಯ. ಶ್ರುತಿ, ಲತಾ, ಶರ್ಮಿಳಾ, ಮೀನಾಕ್ಷಿ ದೇವಯ್ಯ ಮತ್ತು ಸಿಬ್ಬಂದಿ ನಿರೂಪಾ, ಶಶಿ, ಲಿಖಿತಾ, ಕೋಮಲಾ, ದಿನೇಶ ಮತ್ತು ತಾಯಿ ಜಯಂತಿ ರೈ ಇದ್ದರು. ಯಶಸ್ವಿ ರೈ ಕಾಂತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಗ್ರಾಮದ ನಿವಾಸಿ ಬಿ.ಬಿ.ಜಯಂತಿ ಮತ್ತು ಲವಕುಮಾರ್ ದಂಪತಿ ಪುತ್ರ.