ಜಿಲ್ಲೆ

ಅಭಿನಂದನಾ ಸಮಾರಂಭ ೨೨ರಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಾಲಿಕೆ ಮಾಜಿ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ದೀಪಕ ಚಿಂಚೋರೆ ಜನ್ಮದಿನ ನಿಮಿತ್ತ ಅಭಿಮÁನಿ ಬಳಗದ ವತಿಯಿಂದ ಮೇ ೨೨ರಂದು ಸಂಜೆ ೫ ಗಂಟೆಗೆ ಅಭಿನಂದನಾ ಸಮÁರಂಭ ಆಯೋಜಿಸಲಾಗಿದೆ ಎಂದು ಸ್ವಾಗತಿ ಸಮಿತಿ ಅಧ್ಯಕ್ಷ ನಾಗರಾಜ ಗುರಿಕಾರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮÁತನಾಡಿದ ಅವರು, ಚಿಂಚೋರೆ ಜನ್ಮದಿನ ನಿಮಿತ್ತ ಅಂದು ಇಡೀ ದಿನ ಹು-ಧಾ ಅವಳಿನಗರದಲ್ಲಿ ರಕ್ತದಾನ ಶಿಬಿರ, ಕಿವುಡು ಮಕ್ಕಳ ಶಾಲೆಯಲ್ಲಿ ಹಣ್ಣು ವಿತರಣೆ ಸೇರಿ ಇತರ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಂಜೆ ೫ ಗಂಟೆಗೆ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅಭಿನಂದನಾ ಸಮಾರಂಭ ಉದ್ಘಾಟಿಸುವರು. ಶಾಸಕ ಎನ್.ಎಚ್.ಕೋನರಡ್ಡಿ, ಮÁಜಿ ಸಚಿವ ಎ.ಎಂ.ಹಿAಡಸಗೇರಿ, ಅಂಜುಮನ್ ಅಧ್ಯಕ್ಷ ಮಹಮ್ಮದ ಇಸ್ಮಾ¬ಲ್ ತಮಟಗಾರ, ವೈಶುದೀಪ ಪ್ರತಿಷ್ಠಾನ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾ-ï ಹಳ್ಳೂರ, ಅನಿಲಕುಮÁರ ಪಾಟೀಲ, ವಿನೋದ ಅಸೂಟಿ, ಬಸವರಾಜ ಗುರಿಕಾರ, ಅನಿಲಕುಮಾರ ಪಾಟೀಲ, ತವನಪ್ಪ ಅಷ್ಟಗಿ ಸೇರಿ ಪಾಲಿಕೆ ಸದಸ್ಯರು, ಪಕ್ಷದ ನಾಯಕರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಪಕ್ಷ ವಹಿಸಿದ್ದ ಜವಾಬ್ದಾರಿಗಳನ್ನು ಚಿಂಚೋರೆ ಯಶಸ್ವಿಯÁಗಿ ನಿರ್ವಹಿಸಿದ್ದಾರೆ. ಸರ್ವ ಸಮÁಜಗಳ ಬಡ ಜನರಿಗೆ ನೆರವು ನೀಡುವ ಮೂಲಕ ಸಾಮÁಜಿಕ ಸೇವೆಯಲ್ಲಿ ತೊಡಗಿದ್ದಾರೆ. ನಿಸ್ವಾರ್ಥ ಸಮÁಜಮುಖಿ ಕೆಲಸಗಳಿಂದ ಆದರ್ಶ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನ್ಮದಿನದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಗೌರವಿಸಲಾಗುತ್ತಿದೆ ಎಂದರು.
ಅಭಿಮÁನಿ ಬಳಗದ ಗೌರವ ಅಧ್ಯಕ್ಷ ಬಸವರಾಜ ಕಿತ್ತೂರ, ಮೆಹಬೂಬ ಪಠಾಣ, ಎಚ್.ಎಂ.ರಾಜು, ಮಂಜುನಾಥ ಭೋವಿ, ಜೈಲಾನಿ ಜಾಲೇಗಾರ, ಮಹೇಶ ಹುಲ್ಲಣ್ಣವರ, ಇತರರು ಇದ್ದರು.