ಜಿಲ್ಲೆ

ಡಿ.24, 25ಕ್ಕೆ ಕರಾವಳಿ ನೃತ್ಯ ಕಲಾವಿದರ ಸಮ್ಮೇಳನ

ಉಡುಪಿ: ಕರ್ನಾಟಕ ಕರಾವಳಿ ನೃತ್ಯಕಲಾಪರಿಷತ್​ ಆಶ್ರಯದಲ್ಲಿ ಡಿ.24 ಮತ್ತು 25ರಂದು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ಕರಾವಳಿ ನೃತ್ಯ ಕಲಾವಿದರ ಸಮ್ಮೇಳನ ನೃತ್ಯೋತ್ಕರ್ಷ-2023 ಆಯೋಜಿಸಲಾಗಿದೆ ಎಂದು ಸಮ್ಮೇಳನ ಸಮಿತಿ ಪ್ರಧಾನ ಕಾರ್ಯದರ್ಶಿ ಸುಧೀರ್​ ರಾವ್​ ಕೊಡವೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

24ರಂದು ಬೆಳಗ್ಗೆ 9.45ಕ್ಕೆ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್​ ಉದ್ಘಾಟಿಸಲಿದ್ದಾರೆ. ನೂಪುರ ಕಲಾವಿದರ ಸಾಂಸತಿಕ ಟ್ರಸ್ಟ್​ ನಿರ್ದೆಶಕ ಪ್ರೊ.ಕೆ. ರಾಮಮೂರ್ತಿ ರಾವ್​ ಸಮ್ಮೇಳಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಎಂ. ಮೋಹನ್​ ಆಳ್ವಾ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ವಿಧಾನಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್​ ಗಣೇಶ್​ ಕಾರ್ನಿಕ್​, ಪುತ್ತೂರಿನ ವೈದ್ಯ ಡಾ. ಹರಿಕೃಷ್ಣ ಪಾಣಾಜಿ, ಸಮ್ಮೇಳನ ಸಮಿತಿಯ ಅಧ್ಯಕ್ಷ ಕಮಲಾಕ್ಷ ಆಚಾರ್​, ಕಾರ್ಯಾಧ್ಯಕ್ಷ ಯು.ಕೆ.ಪ್ರವಿಣ್​ ಭಾಗವಹಿಸಲಿದ್ದಾರೆ. 25ರಂದು 4.30ಕ್ಕೆ ನಡೆಯುವ ಸಮಾರೋಪದ ಸಮಾರಂಭದಲ್ಲಿ ಕರಾವಳಿಯ ಹಿರಿಯ ನೃತ್ಯಗುರು ಶಾಂತಲಾ ಪ್ರಶಸ್ತಿ ಪುರಸ್ಕತ ಉಳ್ಳಾಲ ಮೋಹನ್​ ಕುಮಾರ್​ ಇವರಿಗೆ ನೃತ್ಯೋತ್ಕರ್ಷ ಪ್ರಶಸ್ತಿಪ್ರದಾನ ಮಾಡಲಾಗುವುದು ಎಂದರು.

2 ದಿನದ ಸಮ್ಮೇಳನದಲ್ಲಿ 250 ನೃತ್ಯಗುರುಗಳು, 750ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅನೇಕ ವಿದ್ವಪೂರ್ಣ ವಿಚಾರಗೋಷ್ಠಿಗಳು, ನೃತ್ಯಪ್ರದರ್ಶನಗಳು, ಚರ್ಚಾಗೋಷ್ಠಿಗಳೂ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕಾರ್ಯಾಧ್ಯಕ್ಷ ಯು.ಕೆ. ಪ್ರವಿಣ್​, ವಿದ್ವಾನ್​ ಭವಾನಿ ಶಂಕರ್​, ವಿದುಷಿ ಭಾಗೀರಥಿ, ವಿದುಷಿ ಮಾನಸಿ ಸುಧೀರ್​, ವಿದುಷಿ ಡಾ. ರಶ್ಮಿ ಗುರುಮೂರ್ತಿ ಉಪಸ್ಥಿತರಿದ್ದರು.