Sports ,RAICHUR 
ಜಿಲ್ಲೆ

ನೌಕರರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ : ಜಿ¯್ಲÁಽಕಾರಿ ನಿತೀಶï ಕೆ.

ರಾಯಚೂರು ವ್ಯಕ್ತಿಯು ದೈನಂದಿನವಾಗಿ ಕ್ರಿಯಾಶೀಲತೆ ಹಾಗೂ ಉತ್ಸಾಹದಿಂದ ಕಾರ್ಯನಿರ್ವಹಿಸಲು, ದೈಹಿಕ ಹಾಗೂ ಮಾನಸಿಕ ಸದೃಢತೆ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆಂದು ಡಿಸಿ ನಿತೀಶï ಕೆ. ಅವರು ಹೇಳಿದರು.

ನಗರದ ಕೃಷಿ ವಿವಿಯ ಕ್ರೀಡಾಂಗಣದಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜï ಇಲಾಖೆ, ಜಿ¯್ಲÁ ಪಂಚಾಯತï ವತಿಯಿಂದ ಆಯೋಜನೆ ಮಾಡಲಾಗಿದ್ದ ೨೦೨೪-೨೫ನೇ ಸಾಲಿನ ನೌಕರರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಾರ್ವಜನಿಕ ಸೇವೆಯಲ್ಲಿರುವವರು ಸಂಯಮದಿಅದ ಹಾಗೂ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಣೆ ಮಾಡಲು ಮಾನಸಿಕ ಆರೋಗ್ಯವು ಪ್ರಮುಖವಾಗಿದೆ. ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ದಿನನಿತ್ಯದ ಜೀವನ ಶೈಲಿಯಲ್ಲಿ ದೈಹಿಕ ಚಟುವಟಿಕೆಗಳಿಗೂ ಒತ್ತು ಕೊಡಬೇಕು ಎಂದರು.

ಪ್ರೀತಿ, ವಿಶ್ವಾಸದಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು. ಭಿನ್ನಾಭಿಪ್ರಾಯ ಇರುವ ಮನಸುಗಳು ಗುಂಪಾಗಿ ಕ್ರೀಡೆಯಲ್ಲಿ ತೊಡಗಿದಾಗ ಭಿನ್ನಾಭಿಪ್ರಾಯ ಬಿಟ್ಟು ಗೆಲುವು ಸಾಽಸಬೇಕೆಂಬ ಮನೋಭಾವದಿಂದ ಉತ್ತಮ ಸಾಧನೆ ಮಾಡಲು ಸಹಕಾರಿಯಾಗಲಿದೆ. ಇಂತಹ ಕ್ರೀಡಾಕೂಟಗಳ ಆಯೋಜನೆಯಿಂದ ಇಲಾಖಾ ನೌಕರರಲ್ಲಿ ಕ್ರಿಯಾಶೀಲತೆ ಮೂಡಲು ಸಹಕಾರಿಯಾಗಿ ಉತ್ತಮ ಪ್ರಗತಿಗೆ ಪೂರಕವಾಗುತ್ತದೆ ಎಂದರು.

ಪಿಡಿಒಗಳು ಸಹ ಅತ್ಯಂತ ಒತ್ತಡದ ವಾತಾವರಣದಲ್ಲಿ ಕೆಲಸ ಮಾಡುತ್ತಾರೆ. ಒಂದು ಜಿ¯್ಲÉಗೆ ಜಿ¯್ಲÁಽಕಾರಿಗಳ ಜವಾಬ್ದಾರಿ ಹೇಗಿರುತ್ತೋ ಅದೇ ರೀತಿ ಪಿಡಿಒಗಳ ಜವಾಬ್ದಾರಿ ಇರುತ್ತದೆ. ಗ್ರಾಮದಲ್ಲಿ ರಸ್ತೆ, ಅಂಗನವಾಡಿಗಳ ನಿರ್ವಹಣೆಯಲ್ಲಿ ಅವರ ಪಾತ್ರ ದೊಡ್ಡದಾಗಿದೆ. ಅವರ ಕಾರ್ಯಕ್ಕೆ ಮತ್ತಷ್ಟು ಉತ್ತೇಜನೆ ನೀಡಬೇಕಿದೆ. ರಾಯಚೂರ ಜಿ¯್ಲÉಯಲ್ಲಿ ಪಿಡಿಓ ಅವರು ಉತ್ತಮವಾಗಿ ಕೆಲಸ ಮಾಡುತ್ತಾರೆ. ತೆರಿಗೆ ಸಂಗ್ರಹ ಸೇರಿದಂತೆ ನಾನಾ ಕಾರ್ಯಚಟುವಟಿಕೆಯಲ್ಲ ಸಹ ನಾವು ಮುಂಚೂಣಿಯಲ್ಲಿದ್ದೇವೆ. ಕ್ರೀಡಾಕೂಟ ಮುಕ್ತಾಯದ ನಂತರ ವಾಪಸ್ಸು ತಮ್ಮ-ತಮ್ಮ ಕಾರ್ಯ ಸ್ಥಾನಕ್ಕೆ ಹೋದಾಗ ಹೆಚ್ಚಿನ ಹುಮ್ಮಸ್ಸಿನಿಂದ, ಸ್ಪೂರ್ತಿಯಿಂದ ತಾವೆಲ್ಲ ಕೆಲಸ ಮಾಡಬೇಕು ಎಂದರು.

ಬಾಕ್ಸ್

೮ ತಂಡಗಳು, ೬೦೦ ಅಽಕಾರಿ ಭಾಗಿ: ಎರಡು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಕಬ್ಬಡ್ಡಿ, ಖೋಖೋ, ವಾಲಿಬಾಲï, ಚೆಸï, ಬ್ಯಾಡ್ಮಿಂಟನï, ಲಾಂಗï ಜಂಪï, ಶಾಟಪುಟï, ಡಿಸ್ಕಸï ಥೋ, ಜÁವಲಿನï ಥೋ, ರನ್ನಿಂಗï ಸೇರಿದಂತೆ ವಿವಿಧ ಸ್ಪರ್ಧೆಗಳು ನಗರದ ಕೃಷಿ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಜಿ¯್ಲÉಯ ಜಿ¯್ಲÁ ಪಂಚಾಯತï, ತಾಲೂಕು ಪಂಚಾಯತï, ಗ್ರಾಮ ಪಂಚಾಯತï ಇಲಾಖೆ ಒಳಗೊಂಡ ೮ ತಂಡಗಳ ಸುಮಾರು ೬೦೦ ಅಽಕಾರಿ-ನೌಕರರು ಭಾಗವಹಿಸಲಿz್ದÁರೆ.

ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿಗಳಾದ ಶಶಿಕಾಂತï ಶಿವಪುರೆ, ಯೋಜನಾ ನಿರ್ದೇಶಕ ಶರಣಬಸವರಾಜ, ಮುಖ್ಯ ಯೋಜನಾಽಕಾರಿ ಡಾ.ಟಿ.ರೋಣಿ, ಮುಖ್ಯ ಲೆಕ್ಕಾಽಕಾರಿ ವಿಜಯಶಂಕರ, ಜಿ¯್ಲÁ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣ ಶಾವಂತಗೇರಿ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿರೇಶï ನಾಯಕ ಸೇರಿದಂತೆ ಅನೇಕರು ಇದ್ದರು.