ಜಿಲ್ಲೆ

ಭಾನುಪ್ರಕಾಶ ನಿಧನಕ್ಕೆ ಬೆಲ್ಲದ ಸಂತಾಪ

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಘ ಪರಿವಾರದ ಹಿರಿಯ ನಾಯಕ, ವಿಧಾನ ಪರಿಷತ್​ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ ನಿಧನಕ್ಕೆ ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಸಂತಾಪ ಸೂಚಿಸಿದ್ದಾರೆ.
ಭಾನುಪ್ರಕಾಶ ಅಗಲಿಕೆಯು ರಾಜ್ಯ ರಾಜಕೀಯಕ್ಕೆ ಬಹು ದೊಡ್ಡ ನಷ್ಟವಾಗಿದೆ. ಸರಳ, ಸಜ್ಜನ ವ್ಯಕ್ತಿತ್ವ ರೂಢಿಸಿಕೊಂಡಿದ್ದ ಅವರು, ಸರ್ಕಾರದ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುವ ಸಮಯದಲ್ಲೇ ಕೊನೆಯುಸಿರೆಳೆದಿದ್ದು ಖೇದಕರ. ಸಂಘ ಪರಿವಾರದ ಹಿರಿಯ ಸೇವಕರಾಗಿ ಅಸಂಖ್ಯಾತ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತ ಬಂದಿದ್ದರು. ಹಲವು ದಶಕಗಳ ಕಾಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅನೇಕರ ಜತೆಗೆ ನಿಕಟ ಒಡನಾಟ ಹೊಂದಿದ್ದ ಭಾನುಪ್ರಕಾಶ, ತಮ್ಮದೇ ಆದ ಅಭಿಮಾನಿ ಬಳಗ ಸಂಪಾದಿಸಿದ್ದರು. ಭಾನುಪ್ರಕಾಶ ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಬೆಲ್ಲದ ಸಂತಾಪ ಸೂಚಿಸಿದ್ದಾರೆ.