ಜಿಲ್ಲೆ

ವಂಚನೆ ಆರೋಪಿಗೆ ಷರತ್ತುಬದ್ಧ ಜಾಮೀನು

Mangaluru - Nishantha Narayana

ಪುತ್ತೂರು: ವಿವಾಹವಾಗುವುದಾಗಿ ನಂಬಿಸಿ ಯುವತಿಗೆ ಮಗು ಕರುಣಿಸಿ ವಂಚಿಸಿದ ಆರೋಪದಲ್ಲಿ ಬಂಽತನಾಗಿದ್ದ ಶೀಕೃಷ್ಣ ಜೆ.ರಾವ್‌ಗೆ ಹೈಕೋರ್ಟ್ ಸೆ.೩ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಜೂನ್ ೨೪ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಜುಲೈ ೪ರಂದು ಮೈಸೂರಿನಲ್ಲಿ ಪೊಲೀಸರು ಬಂಽಸಿದ್ದರು. ಬಳಿಕ ಸ್ಥಳೀಯ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯ ಜಮೀನು ಮಂಜೂರು ಮಾಡದ ಕಾರಣ ಬಂಧನದಲ್ಲಿದ್ದ. ಪ್ರಕರಣದ ತನಿಖೆ ಪೂರ್ಣಗೊಂಡಿರುವುದರಿಂದ, ರಕ್ತದ ಮಾದರಿ ಸಂಗ್ರಹಿಸಿರುವುದರಿಂದ ಅರ್ಜಿದಾರರು ಒಂದು ಲಕ್ಷ ರೂ. ಮೌಲ್ಯದ ಬಾಂಡ್ ಮತ್ತು ಒಬ್ಬ ಶ್ಯೂರಿಟಿ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ನ್ಯಾಯಾಲಯದ ಅನುಮತಿ ಇಲ್ಲದೆ ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗಬಾರದು. ಮುಂದಿನ ಎಲ್ಲ ವಿಚಾರಣಾ ದಿನಾಂಕಗಳಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಸಂಪೂರ್ಣ ವಿಚಾರಣೆ ನಡೆಯಬೇಕು

ಯುವತಿ ಅರ್ಜಿದಾರರೊಂದಿಗೆ ಪ್ರೇಮ ಸಂಬಂಧದಲ್ಲಿದ್ದು, ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿದ್ದರು ಎಂಬ ಅಂಶಗಳನ್ನು ಪರಿಗಣಿಸಿದಾಗ, ಇಬ್ಬರು ವಯಸ್ಕರ ನಡುವಿನ ದೈಹಿಕ ಸಂಬಂಧ ಪ್ರಾಥಮಿಕವಾಗಿ ಸಮ್ಮತಿ ಮೇರೆಗೆ ನಡೆದಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಬಗ್ಗೆ ಸಂಪೂರ್ಣ ವಿಚಾರಣೆ ನಡೆಯಬೇಕಿದೆ ಎಂದು ನ್ಯಾಯಾಲಯ ಹೇಳಿದೆ.