ಜಿಲ್ಲೆ

ಸ್ವಾಮೀಜಿ ಉಚ್ಚಾಟನೆಗೆ ಖಂಡನೆ ಪಂಚಮಸಾಲಿ ಟ್ರಸ್ಟ್​ಗೂ ಪೀಠಕ್ಕೂ ಸಂಬಂಧವಿಲ್ಲ

ಮಹಾಲಿಂಗಪುರ:ಕೂಡಲ ಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಪೀಠದಿಂದ ಉಚ್ಚಾಟನೆ ಮಾಡಿದ್ದೇವೆ ಎಂದು ಪಂಚಮಸಾಲಿ ಟ್ರಸ್ಟ್​ ಹೇಳಿಕೆ ನೀಡಿದ್ದು, ಟ್ರಸ್ಟ್​ಗೂ ಪೀಠಕ್ಕೂ ಯಾವುದೇ ಸಂಬಂಧವಿಲ್ಲ. ಪಂಚಮಸಾಲಿ ಸಮಾಜದ ಮುಂದಿನ ಪೀಳಿಗೆಗೆ ಸರ್ಕಾರದ ಸೌಲಭ್ಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಹಾಗೂ ಹೋರಾಟ ಮಾಡುತ್ತಿರುವ ಶ್ರೀಗಳಿಗೆ ಸಮಾಜದ ಸಂಪೂರ್ಣ ಬೆಂಬಲವಿದೆ ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯ ಧರೆಪ್ಪ ಸಾಂಗಲಿಕರ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಪೀಠಾಧ್ಯರಾದ ಬಸವಜಯ ಶ್ರೀಗಳು ಸಮಾಜದ ಏಳಿಗೆಗಾಗಿ ಶ್ರಮಿಸಿದ್ದಾರೆ. ರಾಜ್ಯದ ಮೂಲೆ&ಮೂಲೆಗೆ ತೆರಳಿ ಸಮಾಜವನ್ನು ಸಂಟಿಸಿದ್ದಾರೆ. ಪಂಚಮಸಾಲಿ ಟ್ರಸ್ಟನಲ್ಲಿರುವವರು ಸಮಾಜದ ಜನತೆಯಿಂದ ಒಪ್ಪಿಗೆ ಪಡೆದಿಲ್ಲ. ಧಾರವಾಡ ಮತ್ತು ಗದಗ ಜಿಲ್ಲೆಯ ಕೆಲವು ಜನ ಟ್ರಸ್ಟ್​ ಮಾಡಿಕೊಂಡು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಸಮಾಜದ ಎಲ್ಲಾ ಜಿಲ್ಲೆ ಮತ್ತು ತಾಲೂಕಿನ ಜನರು ಸೇರಿ ಎಲ್ಲರ ಒಪ್ಪಿಗೆ ಮೇರೆಗೆ ಚುನಾವಣೆ ಪ್ರಕ್ರಿಯೆ ಮೂಲಕ ಟ್ರಸ್ಟ್​ ಸದಸ್ಯರು ಮತ್ತು ಅಧ್ಯರನ್ನು ಆಯ್ಕೆ ಮಾಡಬೇಕು. ಆದರೆ ಈಗಿನ ಟ್ರಸ್ಟ್​ ಸದಸ್ಯರು ತಾವೇ ಆಜೀವ ಸದಸ್ಯರೆಂದು ಸ್ವಯಂ ೂಷಿಸಿಕೊಂಡಿದ್ದಾರೆ. ಚುನಾವಣೆ ಪ್ರಕ್ರಿಯೆ ಮೂಲಕ ಟ್ರಸ್ಟ್​ ಅಧ್ಯರಾಗಬೇಕು. ಕಾಶಪ್ಪನವರ ಟ್ರಸ್ಟ್​ನ ಅಧ್ಯರಾಗಿ ಕೆಲವೇ ತಿಂಗಳ ಹಿಂದೆ ಅಧಿಕಾರ ನಡೆಸುತ್ತಿದ್ದಾರೆ. ಶ್ರೀಗಳನ್ನು ಕೂಡಾ ಈಚಿನ ವರ್ಷಗಳಲ್ಲಿ ಸದಸ್ಯರು ಎಂದು ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಕೂಡಲ ಸಂಗಮ ಟ್ರಸ್ಟ್​ಗೆ ಬರುವ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡು ಟ್ರಸ್ಟ್​ಗೆ ಮತ್ತು ಸಮಾಜಕ್ಕೆ ಬರುವ ಆಸ್ತಿ ತಮ್ಮ ಸ್ವಂತ ಹೆಸರಿಗೆ ಮಾಡಿಕೊಂಡ ದಾಖಲೆ ನನ್ನಲ್ಲಿದೆ. ಇಂತಹ ಕುತಂತ್ರಗಳನ್ನು ಒಪ್ಪಲು ಸಾಧ್ಯವಿಲ್ಲ. ಇಂತಹವರಿಂದಲೇ ಕಿತ್ತೂರ ಸಾಮ್ರಾಜ್ಯ ಅವನತಿ ಹೊಂದಿತು. ಈ ಟ್ರಸ್ಟ್​ಗೂ ಪೀಠಕ್ಕೂ ಯಾವುದೇ ಸಂಬಂಧವಿಲ್ಲ. ಶ್ರೀಗಳ ಉಚ್ಚಾಟನೆ ಮಾಡಿದವರಿಗೆ ಮಾತ್ರ ಉಚ್ಚಾಟನೆ ಅನಿಸಿದೆ. ಪಂಚಮಸಾಲಿ ಸಮಾಜದ ರಾಜ್ಯದ ಒಂದು ಕೋಟಿ ಜನರ ಹೃದಯದಲ್ಲಿ ಶ್ರೀಗಳು ಇದ್ದಾರೆ ಎಂದು ಹೇಳಿದರು.

ಪಂಚಮಸಾಲಿ ಸಮಾಜದ ಮುಖಂಡ ಹಣಮಂತ ಶಿರೋಳ ಮಾತನಾಡಿ, ಶ್ರೀಗಳ ಉಚ್ಚಾಟನೆ ಕುರಿತು ನೀಡಿದ ಹೇಳಿಕೆ ಖಂಡನೀಯ. ಅವರೇ ನಮ್ಮ ಸಮಾಜದ ಜಗದ್ಗುರುಗಳು. ಆ ಟ್ರಸ್ಟ್​ ಸಮಾಜದ ಅಧಿಕೃತ ಟ್ರಸ್ಟ್​ ಅಲ್ಲ. ತಮ್ಮ ಅನುಕೂಲಕ್ಕಾಗಿ ಸ್ವಯಂ ೂಷಿತ ಟ್ರಸ್ಟ್​ ರಚಿಸಿಕೊಂಡಿದ್ದಾರೆ ಎಂದರು.

ಪರಪ್ಪ ಹುದ್ದಾರ ಮಾತನಾಡಿದರು. ಸಮಾಜದ ಮಹಾಲಿಂಗಪುರ ಟಕದ ಅಧ್ಯ ಬಸವರಾಜ ಕೊಪ್ಪದ, ಮಹಾದೇವ ಮಾರಾಪುರ, ಡಾ. ಅಶೋಕ ದಿನ್ನಿಮನಿ, ಶ್ರೀಶೈಲ ಉಳ್ಳಾಗಡ್ಡಿ, ಈರಪ್ಪ ದಿನ್ನಿಮನಿ, ಮಹಾಲಿಂಗ ಕಂಠಿ, ರವಿ ಗಿರಿಸಾಗರ, ಬಸವರಾಜ ನಾಗನೂರ,ಅಣ್ಣೇಶ ಉಳ್ಳಾಗಡ್ಡಿ, ಶ್ರೀನಾಥ ಹಲಗಿಗೌಡರ ಇದ್ದರು.

ಮಹಾಲಿಂಗಪುರದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯ ಧರೆಪ್ಪ ಸಾಂಗಲಿಕರ ಮಾತನಾಡಿದರು. ಬಸವರಾಜ ಕೊಪ್ಪದ, ಮಹಾದೇವ ಮಾರಾಪುರ ಇದ್ದರು.