ತುಮಕೂರು: ತಪು$್ಪಗಳು ಕಂಡುಬಂದರೆ ವರದಿ ಮಾಡದಂತೆ ಪತ್ರಕರ್ತರಿಗೆ ಬೆದರಿಕೆ ಹಾಕಿ, ವಾರ್ನಿಂಗ್ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಕ್ಷಮೆಯಾಚಿಸಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಚಿ.ನಿ.ಪುರುಷೋತ್ತಮ ಹಾಗೂ ಪ್ರಧಾನ ಕಾರ್ಯದರ್ಶಿ ಟಿ.ಎ.ರುರಾಮ್ ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದಿದ್ದ ತುಮಕೂರು ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ್ದ ಡಾ.ಜಿ.ಪರಮೇಶ್ವರ, ಪತ್ರಕರ್ತರು ದಸರಾ ನ್ಯೂನತೆ ಕಂಡರೂ ವರದಿ ಮಾಡಬಾರದು, ನಮ್ಮ ಗಮನಕ್ಕೆ ತರಬೇಕು. ಇದು ಸೀರಿಯಸ್ ವಾರ್ನಿಂಗ್ ಎಂದು ಬೆದರಿಸುವ ರೀತಿಯಲ್ಲಿ ಮಾತನಾಡಿದ್ದರು. ಈ ಹೇಳಿಕೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂ ಪತ್ರ ಬರೆದು ಹೇಳಿಕೆ ಖಂಡಿಸಿದೆ, ಕೂಡಲೇ ಕ್ಷಮೆಯಾಚಿಸಿ ಮಾಧ್ಯಮ ಪ್ರಕಟಣೆ ನೀಡಬೇಕು ಎಂದು ಆಗ್ರಹಿಸಿದೆ. "ವಾರ್ನಿಂಗ್' ಹೇಳಿಕೆಯನ್ನು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂ ಕೂಡ ಖಂಡಿಸಿ, ಕ್ಷಮೆಯಾಚಿಸುವಂತೆ ಆಗ್ರಹಿಸಿದೆ.