Condemnation of attack on brick kiln workers 
ಜಿಲ್ಲೆ

ಇಟ್ಟಿಗೆ ಬಟ್ಟಿ ಕಾರ್ಮಿಕರ ಹಲ್ಲೆಗೆ ಖಂಡನೆ

Vijayapura - Desk - Doddanagouda Gudihindin

ಮುಧೋಳ:ವಿಜಯಪುರದ ಇಟ್ಟಿಗೆ ಬಟ್ಟಿಯೊಂದರಲ್ಲಿ ಕೂಲಿ ಕಾರ್ಮಿಕರನ್ನು ಕೂಡಿಹಾಕಿ ಅಮಾನವೀಯವಾಗಿ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿ ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಕರ್ನಾಟಕದ ಮುಖಂಡರು ನಗರದಲ್ಲಿ ಬುಧವಾರ ಪ್ರತಿಭಟಿದರು.

ಭೀಮ ಅರ್ಮಿ ಅಧ್ಯಕ್ಷ ಸುನೀಲ ಕಂಬೋಗಿ ಮಾತನಾಡಿ, ಇಟ್ಟಂಗಿ ಬಟ್ಟಿ ಮಾಲೀಕ ಖೇಮು ರಾಠೋಡ, ಆತನ ಮಗ ರೋಹನ್ ಖೇಮು ಹಾಗೂ ಸಹಚರರು ನಡೆಸಿದ ಕೃತ್ಯ ಖಂಡನೀಯ. ಹಲ್ಲೆಗೆ ಒಳಗಾದ ಕೂಲಿ ಕಾರ್ಮಿಕರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕೃತ್ಯದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಬಂಧಿಸಿ ಕಾನೂನು ಅಡಿ ಕ್ರಮ ತೆಗೆದುಕೊಳ್ಳಬೇಕು. ಹಲ್ಲೆಗೀಡಾದ ಕಾರ್ಮಿಕರಿಗೆ ಸರ್ಕಾರಿ ನೌಕರಿ ಕೊಡಬೇಕು. ಒಂದು ವೇಳೆ ನಿರ್ಲಕ್ಷೃ ಮಾಡಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಕೃಷ್ಣಪ್ಪ ಮಾದರ, ಮಹೇಶ್ ಹುಗ್ಗಿ, ಮಾನಿಂಗ ಮೇತ್ರಿ, ಆನಂದ ಬೆನ್ನೂರ, ಪ್ರಕಾಶ ರಾನತೀರ್ಥ, ಸೈದು ಭೋವಿ, ಪರುಶರಾಮ ನಿಗಡೆ, ಬಸು ದಾಸರ, ರಾಮದೇವ ಲಮಾಣಿ, ಅನೀಲ ಬರಗಿ, ಮಾರುತಿ ಕಂಬೋಗಿ, ಮಹದೇವ ಮೀಶಿ, ರುಕ್ಮವ್ವ ಪೂಜಾರ, ರೇಣುಕಾ ತಳವಾರ ಇದ್ದರು.