filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 39; 
ಜಿಲ್ಲೆ

ಎ ಮತ್ತು ಬಿ ಖಾತೆ ವಿತರಣೆ ವಿಳಂಬಕ್ಕೆ ಖಂಡನೆ

ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆಯ ಎ-ಖಾತೆ ಮತ್ತು ಬಿ-ಖಾತೆ ವಿತರಣೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಪದಾಧಿಕಾರಿಗಳು ಪಟ್ಟಣದ ನಗರಸಭೆ ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.

ನಗರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ಸಾರ್ವಜನಿಕರಿಗೆ ಅಗತ್ಯವಿರುವ ಎ-ಖಾತೆ ಹಾಗೂ ಬಿ-ಖಾತೆ ದಾಖಲೆಗಳನ್ನು ಸಕಾಲಕ್ಕೆ ನೀಡಬೇಕು ಎಂದು ಆಗ್ರಹಿಸಿದರು.

ಕೆಆರ್‌ಎಸ್ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಗಣೇಶ್ ಮಾತನಾಡಿ, ಸರ್ಕಾರ ನಗರಸಭೆ ವ್ಯಾಪ್ತಿಯ ಆಸ್ತಿಗಳಿಗೆ ಬಿ-ಖಾತೆ ನೀಡಲು ಸೂಚಿಸಿದೆ. ಈಗಾಗಲೇ ಸರ್ಕಾರ ಸುತ್ತೋಲೆ ಹೊರಡಿಸಿ 60 ದಿನಗಳು ಕಳೆದಿವೆ. ಆದರೆ, ಅಧಿಕಾರಿಗಳು ಎ-ಖಾತೆ ಹಾಗೂ ಬಿ-ಖಾತೆ ಸಕಾಲಕ್ಕೆ ನೀಡುತ್ತಿಲ್ಲ. ಸಾರ್ವಜನಿಕರು ಕಚೇರಿಗೆ ಅಲೆ ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಪ್ರಭಾರ ಪೌರಾಯುಕ್ತ ಪರಶಿವ ಮಾತನಾಡಿ, ಕೆಲ ದಿನಗಳ ಹಿಂದಷ್ಟೆ ಪ್ರಭಾರ ಪೌರಾಯುಕ್ತರ ಸ್ಥಾನಕ್ಕೆ ನೇಮಕವಾಗಿದ್ದೇನೆ. ಎರಡು ದಿನದ ಹಿಂದಷ್ಟೆ ಡಿಜಿಟಲ್ ಕೀ ದೊರೆತಿದೆ. ಸೋಮವಾರದಿಂದ ಸೂಕ್ತ ದಾಖಲೆ ಇರುವವರಿಗೆ ಎ-ಖಾತೆ ಮತ್ತು ಬಿ-ಖಾತೆ ಯನ್ನು ನೀಡಲಾಗುವುದು ಎಂದರು. ಭರವಸೆಯಂತೆ ನಡೆಯದಿದ್ದರೆ ಮಂಗಳವಾರ ಪ್ರತಿಭಟನೆ ಮುಂದುವರಿಸುತ್ತೇವೆಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಕೆ.ಆರ್.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಗಿರೀಶ್, ಜಿಲ್ಲಾ ಕಾರ್ಯದರ್ಶಿ ಶಿವಶಂಕರ್, ಮಧುನಾಯಕ, ಕುಮಾರ್ ಇತರರು ಇದ್ದರು.