ಬೆಂಗಳೂರು: ಮೂಲಸೌಕರ್ಯ ವಲಯಕ್ಕೆ ಪ್ರಮುಖ ತಾಂತ್ರಿಕ ಪ್ರಗತಿಯಲ್ಲಿ, ಒಲೆಕ್ಟ್ರಾ ತನ್ನ ಅತ್ಯಾಧುನಿಕ ಜಿಎಫ್ಆರ್ಪಿ ರಿಬಾರ್ (ಗ್ಲಾಸ್ ಫೈಬರ್ ರಿಇನ್ಫೋರ್ಸ್ಡ್ ಪಾಲಿಮರ್ ರಿಬಾರ್) ಅನ್ನು ಪ್ರತಿಷ್ಠಿತ ಎಂಇಐಎಲ್ ತನ್ನ ಬಜೆಟ್ ಸಭೆಯಲ್ಲಿ ಬಿಡುಗಡೆಗೊಳಿಸಿತು.
ಇದು ಕಾಂಕ್ರೀಟ್ ಬಲವರ್ಧನೆಯಲ್ಲಿ ಒಂದು ಮಾದರಿ ಬದಲಾವಣೆ ತರಲಿದ್ದು, ಶಕ್ತಿ, ಬಾಳಿಕೆ ಮತ್ತು ಸುಸ್ಥಿರತೆಯನ್ನು ನೀಡುತ್ತದೆ. ಇಸಿಆರ್ ಗ್ಲಾಸ್ ಮತ್ತು ಎಪಾಕ್ಸಿ ರೆಸಿನ್‌ನಿಂದ ವಿನ್ಯಾಸಗೊಳಿಸಲಾದ ಒಲೆಕ್ಟ್ರಾ ಜಿಎಫ್ಆರ್ಪಿ ರಿಬಾರ್ ಸಾಂಪ್ರದಾಯಿಕ ಉಕ್ಕಿನ ಬಲವರ್ಧನೆಗಿಂತ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ. ಸುಮಾರು ಎರಡು ಪಟ್ಟು ಹೆಚ್ಚು ಬಲಶಾಲಿಯಾಗಲಿದ್ದು, ಉಕ್ಕಿಗಿಂತ ನಾಲ್ಕು ಪಟ್ಟು ಹಗುರವಾಗಿರುವುದರಿಂದ, ಇದರ ನಿರ್ವಹಣೆ ಮತ್ತು ಸಾಗಣೆ ಸುಲಭವಾಗಲಿದೆ. ಹೆಚ್ಚುವರಿಯಾಗಿ, ಇದರ ತುಕ್ಕು ಹಿಡಿಯದ, ವಾಹಕವಲ್ಲದ ಮತ್ತು ನೀರುನಿರೋಧಕ ಗುಣಲಕ್ಷಣಗಳು ಈ ಹೊಸ ಅವಿಷ್ಕಾರದ ವಿಶೇಷತೆಯಾಗಿದೆ ಎಂದು ಒಲೆಕ್ಟ್ರಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಪ್ರದೀಪ್ ತಿಳಿಸಿದರು.
ಕ್ರಾಂತಿಕಾರಿ ಜಿಎಫ್ಆರ್ಪಿ ರಿಬಾರ್ ಅನ್ನು ಎಂಐಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಕೃಷ್ಣ ರೆಡ್ಡಿ, ಒಲೆಕ್ಟ್ರಾ ಸಿಎಂಡಿ ಕೆ.ವಿ.ಪ್ರದೀಪ್, ಸಂಸ್ಥೆಯ ಸಮೂಹ ನಿರ್ದೇಶಕ ಸಿ.ಎಚ್. ಸುಬ್ಬಯ್ಯ ಮತ್ತು ಬಿ. ಶ್ರೀನಿವಾಸ್ ರೆಡ್ಡಿ ಇದ್ದರು.