ಜಿಲ್ಲೆ

ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ

ಕೋಟ: ಕುಂದಾಪುರ ವಿಧಾನಸಭಾ ಕ್ಷೇತ್ರದ ಎಂಟು ಪ್ರೌಢಶಾಲೆಗಳ ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಸಮಾರಂಭ ಸಾಲಿಗ್ರಾಮ ದೇವಳದ ಮುಂಭಾಗದಲ್ಲಿ ಇತ್ತೀಚೆಗೆ ನಡೆಯಿತು.

ನಾಲ್ಕು ದಿನಗಳ ಯಕ್ಷಗಾನ ಉತ್ಸವ ಶ್ರೀ ಗುರುನರಸಿಂಹ ದೇವಳದ ವತಿಯಿಂದ ನಡೆದಿದ್ದು, ದೇಗುಲ ಅಧ್ಯಕ್ಷ ಡಾ.ಕೆ.ಎಸ್. ಕಾರಂತ ಅವರನ್ನು ಗೌರವಿಸಲಾಯಿತು.

ಆನಂದ ಸಿ.ಕುಂದರ್, ಸುರೇಶ್ ತುಂಗ,ಪಿ.ಕಿಶನ್ ಹೆಗ್ಡೆ, ಎಚ್. ಸುಜಯೀಂದ್ರ ಹಂದೆ,ರಾಘವ ಶೆಟ್ಟಿ, ಕೆ. ತಾರಾನಾಥ ಹೊಳ್ಳ, ಎಂ.ಗಂಗಾಧರ್ ರಾವ್ ಅಭ್ಯಾಗತರಾಗಿ ಪಾಲ್ಗೊಂಡರು.

ಟ್ರಸ್ಟ್‌ನ ನಾರಾಯಣ ಎಂ.ಹೆಗಡೆ ಸ್ವಾಗತಿಸಿದರು. ಮುರಲೀ ಕಡೆಕಾರ್ ನಿರೂಪಿಸಿದರು. ಎಚ್.ಎನ್.ಶೃಂಗೇಶ್ವರ ವಂದಿಸಿದರು. ಯಕ್ಷಗಾನ ಕಲಾರಂಗದ ಸದಸ್ಯರಾದ ಗಣೇಶ್ ಬ್ರಹ್ಮಾವರ, ಯು.ಎಸ್.ರಾಜಗೋಪಾಲ ಆಚಾರ್ಯ, ಬಿ.ಸಂತೋಷ್ ಕುಮಾರ್ ಶೆಟ್ಟಿ ಸಹಕರಿಸಿದರು.