ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೃಷ್ಣಾನದಿಯಿಂದ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ನೆರೆ ಸಂತ್ರಸ್ತರು ವಾಸವಿರುವ ತಾಲೂಕಿನ ಕಾಳಜಿ ಕೇಂದ್ರಗಳಿಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ ನೇತೃತ್ವದ ತಂಡ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಜಿರೋ ಪಾಯಿಂಟ್, ಸತ್ತಿ ಆರ್.ಸಿ, ರಡ್ಡೇರಹಟ್ಟಿ ಆರ್.ಸಿ, ಹುಲಗಬಾಳ ಗ್ರಾಮಗಳಲ್ಲಿರುವ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಆಹವಾಲು ಆಲಿಸಿದರು. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾದರೆ ನದಿ ದಡದ ಗ್ರಾಮಸ್ಥರಿಗೆ ಯಾವ ರೀತಿ ಕಾಳಜಿ ಕೇಂದ್ರಗಳಲ್ಲಿ ಆರೈಕೆ ಮಾಡಬೇಕು ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಚಿಕ್ಕೋಡಿ ಎಸಿ ಎಸ್.ಎಸ್. ಸಂಪಗಾಂವಿ, ಗ್ರೇಡ್ 2 ತಹಸೀಲ್ದಾರ್ ಶ್ರೀಶೈಲ ಗೂಡಣೆ, ಕಂದಾಯ ನಿರೀಕ್ಷಕ ಶಿವಾನಂದ ಮೆಣಸಂಗಿ, ನೋಡಲ್‌ಅಧಿಕಾರಿಗಳಾದ ಪ್ರಶಾಂತ ಗಾಣಿಗೇರ, ವೆಂಕಟೇಶ ಕುಲಕರ್ಣಿ, ಗ್ರಾಮಾಡಳಿತಾಧಿಕಾರಿ ಶಿವಾನಂದ ಜಾಯಗೋಳ, ಗೋಪಾಲ ಹಾಸಿಲಕರ, ಎಸ್.ಎಸ್.ಪತ್ತಾರ, ಆರೋಗ್ಯ ಸಹಾಯಕಿ ನಾಗಮ್ಮ ಕೆ. ಇತರರು ಇದ್ದರು.