ಹಿರಣ್ಯಕೇಶಿ ನದಿಯ ಪ್ರವಾಹ ಪೀಡಿತ ಪ್ರದೇಶ ಹಾಗೂ ಕಾಳಜಿ ಕೇಂದ್ರಗಳಿಗೆ ಶಾಸಕ ನಿಖಿಲ ಕತ್ತಿ ಭೇಟಿ ನೀಡಿ ಪರಿಶೀಲಿಸಿ ಸಂತ್ರಸ್ತರಿಗೆ ಹೊದಿಕೆ ವಿತರಿಸಿದರು. ಮಂಜುಳಾ ನಾಯಿಕ, ಪ್ರಕಾಶ ಮಠದ, ಶಿವಶರಣ ಅವಜಿ, ರವೀಂದ್ರ ಗಡಾದ ಇತರರಿದ್ದರು. 
ಜಿಲ್ಲೆ

ಕಾಳಜಿ ಕೇಂದ್ರಕ್ಕೆ ಶಾಸಕ ನಿಖಿಲ ಭೇಟಿ

ಪ್ರಶಾಂತ ಹೂಗಾರ

ಸಂಕೇಶ್ವರ: ಹಿರಣ್ಯಕೇಶಿ ನದಿಯ ಪ್ರವಾಹ ಪೀಡಿತ ಪ್ರದೇಶ ಹಾಗೂ ಕಾಳಜಿ ಕೇಂದ್ರಗಳಿಗೆ ಶಾಸಕ ನಿಖಿಲ ಕತ್ತಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಪ್ರವಾಹ ಇಳಿಮುಖವಾದ ನಂತರ ಹಾನಿ ಬಗ್ಗೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಶಾಸಕ ನಿಖಿಲ ಕತ್ತಿ ಭರವಸೆ ನೀಡಿದರು.

ಮಳೆಯಿಂದ ಹಾಳಾದ ರಸ್ತೆಗಳು, ಪ್ರವಾಹದಿಂದ ದೇವಸ್ಥಾನಗಳು, ಜನ ವಸತಿ ಪ್ರದೇಶಗಳು ತೋಟ ಪಟ್ಟಿಗಳಲ್ಲಿ ಮುಳುಗಡೆಯಾಗಿರುವುದನ್ನು ವೀಕ್ಷಿಸಿ, ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಂತೆ ಹಾಗೂ ತೊಂದರೆಗೊಳಗಾದ ಪ್ರದೇಶಗಳ ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ದನಕರುಗಳಿಗೆ ಮೇವಿನ ಕೊರತೆಯಾದಲ್ಲಿ ತಾಲೂಕು ಆಡಳಿತದಿಂದ ಮೇವಿನ ವ್ಯವಸ್ಥೆ ಮಾಡಲಾಗುವುದು ಎಂದರು.

ಕಾಳಜಿ ಕೇಂದ್ರಗಳಲ್ಲಿ ವಸತಿ ಇರುವ ಸಂತ್ರಸ್ತರಿಗೆ ಹೊದಿಕೆಗಳನ್ನು ನೀಡಿದರು. ಹಿರಿಯ ಧುರೀಣ ಅಪ್ಪಾಸಾಹೇಬ ಶಿರಕೋಳಿ, ಅಮರ ನಲವಡೆ, ಸಂಜಯ ಶಿರಕೋಳಿ, ಪುರಸಭೆ ಸದಸ್ಯರಾದ ಸುನೀಲ ಪರ್ವತರಾವ, ಶಿವಾನಂದ ಮುಡಶಿ, ಶ್ರೀಕಾಂತ ಹತನೂರಿ, ಅಭಿಜಿತ ಕುರಣಕರ, ಬಸವರಾಜ ಬಾಗಲಕೋಟಿ, ರೋಹಣ ನೇಸರಿ, ತಹಸೀಲ್ದಾರ್ ಮಂಜುಳಾ ನಾಯಿಕ, ಮುಖ್ಯಾಧಿಕಾರಿ ಪ್ರಕಾಶ ಮಠದ, ಸಿಪಿಐ ಶಿವಶರಣ ಅವಜಿ, ಅಭಿಯಂತ ರವೀಂದ್ರ ಗಡಾದ ಇತರರು ಇದ್ದರು.