ಮಹಾಶಿವರಾತ್ರಿಯ ಅಂಗವಾಗಿ ಸಿರಗುಪ್ಪದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಶಾಂತಿ ಸದ್ಭಾವನೆ ಯಾತ್ರೆಗೆ ಸಂಚಾಲಕಿ ಪೂರ್ಣಿಮಾ ಅಕ್ಕ ಚಾಲನೆ ನೀಡಿದರು. ಸರ್ಕಾರಿ ನೌಕರ ಸಂಘದ ತಾಲೂಕು ಕಾರ್ಯದರ್ಶಿ ಕೆ.ಎಂ.ಚಂದ್ರಕಾಂತ, ಪ್ರಮುಖರಾದ ಶಿವಕುಮಾರ, ವೆಂಕಟೇಶ ನಾಯಕ, ಬಿ.ಜಿ.ರವಿ, ಬಿ.ಇ.ಮಂಜುನಾಥ, ಬಿ.ತಿಮ್ಮಯ್ಯ ಶೆಟ್ಟಿ, ಹನುಮಂತರೆಡ್ಡಿ ಇದ್ದರು. 
ಜಿಲ್ಲೆ

ಏಕಾಗ್ರತೆಗೆ ಅಧ್ಯಾತ್ಮ ಅಗತ್ಯ

Kopala - Desk - Eraveni

ಸಿರಗುಪ್ಪ: ಅಧ್ಯಯನದಿಂದ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು. ಅಧ್ಯಯನಕ್ಕೆ ಬೇಕಾದ ಏಕಾಗ್ರತೆಯನ್ನು ಅಧ್ಯಾತ್ಮ ನೀಡುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪೂರ್ಣಿಮಾ ಅಕ್ಕ ಹೇಳಿದರು.

ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಾ ಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಶಾಂತಿ ಸದ್ಭಾವನೆ ಯಾತ್ರೆಗೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಎಲ್ಲ ಧರ್ಮಗಳೂ ಪರಮಾತ್ಮನನ್ನು ಜ್ಯೋತಿ ರೂಪದಲ್ಲಿ ಕಾಣುತ್ತವೆ. ಅಂತಹ ಜ್ಯೋತಿಯು ನಮ್ಮ ಆತ್ಮದ ಜೊತೆ ಅನುಸಂಧಾನ ಹೊಂದಬೇಕೆಂದು ಹೇಳಿದರು.

ಕೇಂದ್ರದ ಮುಂದೆ ಮಹಾ ಶಿವರಾತ್ರಿ ಅಂಗವಾಗಿ ದ್ವಾದಶ ಜ್ಯೋತಿಲಿರ್ಂಗಗಳ ದಿವ್ಯ ದರ್ಶನ, ಮಹಿಳಾ ಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ತಾಲೂಕು ಕ್ರೀಡಾಂಗಣದ ಮೂಲಕ ಕನಕ, ವಾಲ್ಮೀಕಿ, ಮಹಾತ್ಮ ಗಾಂಧಿ, ಅಂಬೇಡ್ಕರ್ ವೃತ್ತದ ಮೂಲಕ ಯಾತ್ರೆಯು ವಿಶ್ವವಿದ್ಯಾಲಯದಲ್ಲಿ ಸಂಪನ್ನಗೊಂಡಿತ್ತು.