ಜಿಲ್ಲೆ

ಕವನ ರಚನೆಗೆ ಏಕಾಗ್ರತೆ ಬಹಳ ಮುಖ್ಯ


ರಾಯಬಾಗ: ಕವಿಗಳಿಗೆ ಏಕಾಂತ ಬಹಳ ಮುಖ್ಯವಾಗಿದ್ದು, ಆ ಸಮಯದಲ್ಲಿ ಕವನ, ಚುಟುಕುಗಳು ಹುಟ್ಟಿಕೊಳ್ಳುತ್ತವೆ ಎಂದು ಹಿರಿಯ ಸಾಹಿತಿ ಶಿವಾನಂದ ಬೆಳಕೂಡ ಹೇಳಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ರಾಯಬಾಗದ ಸಾಹಿತ್ಯ ಬಳಗ ಹಾಗೂ ಶಿರೂರ ಗ್ರಾಮೀಣ ಕಲೆ ಹಾಗೂ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯುವ ಕವಿ ಶಿರೂರ ಶ್ರೀಶೈಲ ಅವರ ಚುಟುಕು ಸಂಕಲನ ‘ಬೆವರ ಚಿಪ್ಪಿನ ಮುತ್ತು’ ಕೃತಿ ಲೋಕಾರ್ಪಣೆ ಹಾಗೂ ಶಾಲೆಗಳಿಗೆ ಪ್ರಥಮ ಚಿಕಿತ್ಸೆ ಕಿಟ್ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಯಬಾಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಚುಟುಕು ಸಂಕಲನ ‘ಬೆವರ ಚಿಪ್ಪಿನ ಮುತ್ತು’ ಕೃತಿಯನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು. ಶಿರೂರ ಶ್ರೀಶೈಲ, ಶಿವಾನಂದ ಬೆಳಕೂಡ, ವೀರಣ್ಣ ಮಡಿವಾಳರ, ರತ್ನಕ್ಕ ಬಾಳಪ್ಪನವರ,ಎಚ್.ಕೆ.ಗುರವ, ತಾನಾಜಿ ಶಿರಗುಪ್ಪಿ, ಡಿ.ಎಚ್.ಯಲ್ಲಟ್ಟಿ, ಕಲ್ಯಾಣರಾವ ದೇಶಪಾಂಡೆ, ಕುಮಾರ ಅವಳೆ, ಅಲ್ಲಾಪಟೇಲ ಗಣೆಯಾರ, ಇತರರಿದ್ದರು. 

ಸಾಹಿತಿ ವೀರಣ್ಣ ಮಡಿವಾಳರ ಮಾತನಾಡಿ, ಶ್ರೀಶೈಲ ಅವರು ರೋಗಿಗಳ ಸೇವೆಯೊಂದಿಗೆ ಚುಟುಕುಗಳನ್ನು ರಚಿಸಿ, ಸಮಾಜದ ಅಂಕುಡೊಂಕು ತಿದ್ದಲು ಪ್ರಯತ್ನಿಸಿದ್ದಾರೆ ಎಂದರು.

ರತ್ನಕ್ಕ ಬಾಳಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಎಚ್.ಕೆ.ಗುರವ, ತಾನಾಜಿ ಶಿರಗುಪ್ಪಿ, ಡಿ.ಎಚ್.ಯಲ್ಲಟ್ಟಿ, ಕಲ್ಯಾಣರಾವ ದೇಶಪಾಂಡೆ, ಕುಮಾರ ಅವಳೆ, ಅಲ್ಲಾಪಟೇಲ ಗಣೆಯಾರ, ಅಶೋಕ ಅಂಗಡಿ, ಮುತ್ತಪ್ಪ ಭಜಂತ್ರಿ, ಸಾಗರ ಝೇಂಡೆನ್ನವರ, ಮಿಥುನ ಕಾಂಬಳೆ, ರಾಜು ಚೌಗಲಾ, ಅಮರ ಕಾಂಬಳೆ ಇತರರಿದ್ದರು.