ಯೋಗ ಮತ್ತು ಚೆಸ್ ಪಂದ್ಯಾವಳಿಯನ್ನು ರಾ.ಹ.ತಿಮ್ಮೇನಹಳ್ಳಿ ಉದ್ಘಾಟಿಸಿದರು. ವಿಲ್ಸನ್, ಸುನೀತಾ ಮುಂತಾದವರಿದ್ದರು.  
ಜಿಲ್ಲೆ

ಚೆಸ್‌ನಿಂದ ಏಕಾಗ್ರತೆ ಹೆಚ್ಚಳ: ತಿಮ್ಮೇನಹಳ್ಳಿ ಅಭಿಮತ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಯೋಗ ಮತ್ತು ಚೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯೋಗದಿಂದ ಆರೋಗ್ಯ ವೃದ್ಧಿಯಾದರೆ, ಚದುರಂಗದಿಂದ ಬುದ್ಧಿ ಮತ್ತು ಏಕಾಗ್ರತೆ ಹೆಚ್ಚುತ್ತದೆ ಎಂದು ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಸಂಘದ ಜಿಲ್ಲಾಧ್ಯಕ್ಷ ರಾ.ಹ.ತಿಮ್ಮೇನಹಳ್ಳಿ ಅಭಿಪ್ರಾಯಪಟ್ಟರು.

ಕ್ರೀಡೆಯಿಂದ ಶಿಸ್ತು, ಸಂಯಮ ಬೆಳೆಯುತ್ತದೆ. ಸೋಲು, ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಭಾಗವಹಿಸುವುದು ಅವಶ್ಯ. ಇಲ್ಲಿ ಭಾಗವಹಿಸಿದ ಮಕ್ಕಳು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ದೇಶಕ್ಕೆ ಕೀರ್ತಿ ತರಬೇಕೆಂದು ಆಶಿಸಿದರು.
ಚೆಸ್ ತೀರ್ಪುಗಾರರಾಗಿ ಭಾಗವಹಿಸಿದ್ದ ರಾಷ್ಟ್ರೀಯ ತೀರ್ಪುಗಾರರಾದ ವಿಲ್ಸನ್ ಮಾತನಾಡಿ, ಚದುರಂಗದಲ್ಲಿ ಶಿವಮೊಗ್ಗ ರಾಷ್ಟ್ರ ಮತ್ತು ಅಂತರಾಷ್ಟ್ರಮಟ್ಟದ ಅನೇಕ ಕ್ರೀಡಾಪಟುಗಳನ್ನು ನೀಡಿದೆ ಎಂದು ನೆನಪಿಸಿಕೊಂಡರು. ಯೋಗಾಸನ ತೀರ್ಪುಗಾರರಾದ ಸುನೀತಾ ಮುಂತಾದವರಿದ್ದರು.