ಜಿಲ್ಲೆ

ವಾಹನದ ನಂಬರ್ ಪ್ಲೇಟ್ ಮರೆಮಾಚಿದರೆ ಕ್ರಿಮಿನಲ್ ಪ್ರಕರಣ

ಸದೇಶ್ ಕಾರ್ಮಾಡ್

ಮೈಸೂರು: ದ್ವಿಚಕ್ರ ವಾಹನದ ನೋಂದಣಿ ಮರೆಮಾಚಿದ್ದ ಸವಾರನೊಬ್ಬನ ವಿರುದ್ಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಗುರುವಾರ ವಂಚನೆ ಪ್ರಕರಣ ದಾಖಲಾಗಿದೆ.

ನಗರದ ವಿವಿ ಪುರಂ ಸಂಚಾರ ಠಾಣಾ ವ್ಯಾಪ್ತಿಯ ಸೆಂಟ್ ಜೋಸೆಫ್ ಶಾಲೆ ಜಂಕ್ಷನ್‌ನಲ್ಲಿ ಸವಾರನೊಬ್ಬ ನಂಬರ್ ಪ್ಲೇಟ್‌ಗೆ ಸ್ಟಿಕರ್ ಅಂಟಿಸಿ ಸಂಚರಿಸುತ್ತಿರುವುದನ್ನು ಗಮನಿಸಿದ ಪೊಲೀಸರು ವಾಹನವನ್ನು ತಡೆದು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.