ಹಗರಿಬೊಮ್ಮನಹಳ್ಳಿಯಲ್ಲಿ ಪುರಸಭೆಯಿಂದ ಫಾರ್ಮ್-3 ಕುರಿತು ಜನಜಾಗೃತಿ ನಡೆಯಿತು. ಪುರಸಭೆ ಅಧ್ಯಕ್ಷ ಮರಿರಾಮಪ್ಪ, ಸದಸ್ಯರಾದ ಭೋವಿ ವೀರೇಶ, ಅಜೀಜುಲ್ಲಾ, ಪ್ರಮುಖರಾದ ಎಚ್.ಎಂ.ವಿಜಯ, ಚಿಂತ್ರಪಳ್ಳಿ ದೇವೇಂದ್ರ ಹಾಗೂ ಮುಖ್ಯಾಧಿಕಾರಿ ಎಂ.ಕೆ.ಮುಗುಳಿ ಇತರರಿದ್ದರು. 
ಜಿಲ್ಲೆ

ಗಣಕೀಕೃತ ನಮೂನೆ-3 ಪಡೆಯಿರಿ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ಪುರಸಭೆ ವ್ಯಾಪ್ತಿಯ ನಿವಾಸಿಗಳು ಆಸ್ತಿಗಳಿಗೆ ಇ-ಖಾತಾ ಅಭಿಯಾನದಡಿ ಫಾರ್ಮ್-3 ಪಡೆಯಲು ಪೂರಕ ದಾಖಲೆಗಳನ್ನು ಸಲ್ಲಿಸಬೇಕೆಂದು ಪುರಸಭೆ ಅಧ್ಯಕ್ಷ ಮರಿರಾಮಪ್ಪ ತಿಳಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪುರಸಭೆಯಿಂದ ಗುರುವಾರ ಹಮ್ಮಿಕೊಂಡಿದ್ದ, ಇ-ಖಾತಾ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.

ಸರ್ಕಾರಿ ನಿವೇಶನ, ಅರೆ ಸರ್ಕಾರಿ, ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಸ್ವತ್ತುಗಳನ್ನು ಹೊರತು ಪಡಿಸಿ ಗ್ರಾಮಠಾಣಾ ಅಥವಾ ಭೂ-ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡ ಹಾಗೂ ಅನುಮೋದನೆಗೊಳ್ಳದ ಬಡಾವಣೆ, ಅಧಿಕೃತ ಹಾಗೂ ಅನಧಿಕೃತ ಬಡಾವಣೆ, ಉಪ ವಿಭಜನೆ ಮಾಡಿ ಮಾರಾಟ ಮಾಡಿರುವ, ಕಂದಾಯ ಭೂಮಿಯಲ್ಲಿ ನಿವೇಶನ ಮತ್ತು ಕಟ್ಟಡಗಳಿಗೆ ಇ- ಖಾತಾ ಅಭಿಯಾನದಡಿ ಗಣಕೀಕೃತ ನಮೂನೆ-3 ಪಡೆಯುವಂತೆ ತಿಳಿಸಿದರು.

ಮುಖ್ಯಾಧಿಕಾರಿ ಎಂ.ಕೆ.ಮುಗುಳಿ ಮಾತನಾಡಿ, ಸಾರ್ವಜನಿಕರು ಸರ್ಕಾರದ ಆದೇಶದಂತೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ, ನಿಯಮಾನುಸಾರ ತೆರಿಗೆ ಪಾವತಿಸಿ, ಪಾರ್ಮ್-3 ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಸದಸ್ಯರಾದ ಭೋವಿ ವೀರೇಶ್, ಅಜೀಜುಲ್ಲಾ, ನಾಮನಿರ್ದೇಶಿತ ಸದಸ್ಯರಾದ ಉಪ್ಪಾರ್ ಬಾಳಪ್ಪ, ತ್ಯಾವಣಿಗಿ ಕೊಟ್ರೇಶ್, ಮಂಜುನಾಥ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಜಂದಿಸಾಬ್, ಪ್ರಮುಖರಾದ ಎಚ್.ಎಂ.ವಿಜಯಕುಮಾರ್, ಚಿಂತ್ರಪಳ್ಳಿ ದೇವೇಂದ್ರ, ಗುಂಡ್ರು ಹನುಮಂತ ಇತರರಿದ್ದರು.